7

ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ದಶಕದ ಸಂಭ್ರಮ

Published:
Updated:

ಬೆಂಗಳೂರು: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಕಾರ್ಯಾರಂಭಗೊಂಡು 10 ವರ್ಷ ಪೂರ್ಣಗೊಂಡು 11 ನೇ ವರ್ಷಕ್ಕೆ ಕಾಲಿಟ್ಟಿದೆ.

ದೇಶದ ಮೂರನೇ ಅತ್ಯಂತ ಜನನಿಬಿಡ ವಿಮಾನ ನಿಲ್ದಾಣ ಇದಾಗಿದೆ. ಇದಕ್ಕೂ ಮೊದಲು ಎಚ್‌ಎಎಲ್ ವಿಮಾನನಿಲ್ದಾಣದಿಂದ ಕಾರ್ಯನಿರ್ವಹಣೆ ಆಗುತ್ತಿತ್ತು.

ದಿನದಿಂದ ದಿನಕ್ಕೆ ವಿಮಾನದಲ್ಲಿ ಪ್ರಯಾಣಿಸುವವರ ಸಂಖ್ಯೆ ಹೆಚ್ಚಳವಾಗಿದೆ.  2017–18 ರ ಒಂದೇ ವರ್ಷದಲ್ಲಿ 1,97,330 ವೈಮಾನಿಕ ಸಂಚಾರ ನಡೆದಿದೆ. ಈಗ ದೇಶ– ವಿದೇಶಗಳ 67 ಸ್ಥಳಗಳಿಗೆ ವಿಮಾನಗಳು ಹೋಗುತ್ತವೆ. 46 ದೇಶಿಯ ಮತ್ತು 21 ಅಂತರರಾಷ್ಟ್ರೀಯ ಸ್ಥಳಗಳಿಗೆ ವಿಮಾನಗಳು ಹೋಗುತ್ತಿವೆ. ಒಟ್ಟು 44 ವಿಮಾನ ಕಂಪನಿಗಳು ಕಾರ್ಯ ನಿರ್ವಹಿಸುತ್ತಿವೆ.

ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದ ಎರಡನೇ ರನ್‌ವೇ 2019 ರ ಸೆಪ್ಟಂಬರ್‌ಗೆ ಪೂರ್ಣಗೊಳ್ಳಲಿದೆ. ಎರಡನೇ ಟರ್ಮಿನಲ್‌ ಪೂರ್ಣಗೊಂಡ ಬಳಿಕ ಪ್ರಯಾಣಿಕರ ಸಂಖ್ಯೆ ವರ್ಷಕ್ಕೆ 50 ಲಕ್ಷಕ್ಕೆ ತಲುಪಲಿದೆ. ಈಗ ವರ್ಷಕ್ಕೆ 25 ಲಕ್ಷ  ಪ್ರಯಾಣಿಕರು ಬಂದು ಹೋಗುತ್ತಿದ್ದಾರೆ.

ಎರಡನೇ ರನ್‌ವೇ ನಿರ್ಮಾಣದ ಗುತ್ತಿಗೆ ಎಲ್ಅಂಡ್‌ಟಿ ಕಂಪನಿಗೆ ಲಭಿಸಿದ್ದು, ಗುತ್ತಿಗೆ ಮೊತ್ತ ₹ 1358 ಕೋಟಿ. ಈ ರನ್‌ ವೇ ಪೂರ್ಣಗೊಂಡ ಬಳಿಕ ವಿಮಾನಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಹೋಗಲಿವೆ. ಇದರಲ್ಲಿ ಏರ್‌ಬಸ್‌–380 ಸೇರಿ ಎಲ್ಲ ಬಗೆಯ ವಿಮಾನಗಳು ಬಂದಿಳಿಯಬಹುದು ಎಂದು ಮೂಲಗಳು ಹೇಳಿವೆ.f

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry