ಬಾಯ್ಲರ್ ಸ್ಫೋಟ: ಕಾರ್ಮಿಕ ಸಾವು

7
ನಿತೀನ್ ಗಡ್ಕರಿ ಕುಟುಂಬ ಸದಸ್ಯರ ಮಾಲೀಕತ್ವದ ಘಟಕ

ಬಾಯ್ಲರ್ ಸ್ಫೋಟ: ಕಾರ್ಮಿಕ ಸಾವು

Published:
Updated:

ನಾಗ್ಪುರ: ಕೇಂದ್ರ ಸಚಿವ ನಿತೀನ್ ಗಡ್ಕರಿ ಕುಟುಂಬದ ಒಡೆತನದ ಅರಿಶಿಣ ಸಂಸ್ಕರಣಾ ಘಟಕದಲ್ಲಿ ಬಾಯ್ಲರ್ ಸ್ಫೋಟಗೊಂಡು ಕಾರ್ಮಿಕನೊಬ್ಬ ಮಂಗಳವಾರ ಮೃತಪಟ್ಟಿದ್ದಾರೆ.

ಮೃತರನ್ನು ಪ್ರದೀಪ್ ಶ್ರೀರಾಮ್ (45) ಎಂದು ಗುರುತಿಸಲಾಗಿದೆ. ಶ್ರೀರಾಮ್ ಸೇರಿ ಮೂವರು ಘಟಕದಲ್ಲಿ ಕೆಲಸ ಮಾಡುತ್ತಿದ್ದಾಗ ಬಾಯ್ಲರ್ ಸ್ಪೋಟಗೊಂಡಿದೆ. ಹೊರ ಹೋಗಲು ಮೂವರು ಓಡಲು ಆರಂಭಿಸಿದ್ದು, ಈ ಸಂದರ್ಭದಲ್ಲಿ ಮೊದಲ ಮಹಡಿಯಿಂದ ನೆಲ ಮಹಡಿಗೆ ಬಿದ್ದು ತೀವ್ರವಾಗಿ ಗಾಯಗೊಂಡ ಶ್ರೀರಾಮ್ ಮೃತಪಟ್ಟಿದ್ದಾರೆ ಎಂದು ಕಮಲೇಶ್ವರ ಠಾಣೆ ಪೊಲೀಸರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry