ಡಚ್ ಪ್ರಧಾನಿ ಬೆಂಗಳೂರು ಭೇಟಿ ರದ್ದು

7
ಪ್ರವಾಸ ಮೊಟಕುಗೊಳಿಸಿ ತವರಿಗೆ ವಾಪಸಾದ ಮಾರ್ಕ್

ಡಚ್ ಪ್ರಧಾನಿ ಬೆಂಗಳೂರು ಭೇಟಿ ರದ್ದು

Published:
Updated:
ಡಚ್ ಪ್ರಧಾನಿ ಬೆಂಗಳೂರು ಭೇಟಿ ರದ್ದು

ನವದೆಹಲಿ: ಗುರುವಾರ ಭಾರತ ಪ್ರವಾಸ ಆರಂಭಿಸಿದ್ದ ನೆದರ್ಲೆಂಡ್ಸ್‌ ಪ್ರಧಾನಿ ಮಾರ್ಕ್ ರುಟ್ಟೆ ಅವರು ಉದ್ದೇಶಿತ ಬೆಂಗಳೂರು ಭೇಟಿಯನ್ನು ದಿಢೀರ್‌  ರದ್ದುಗೊಳಿಸಿದ್ದಾರೆ. ಶುಕ್ರವಾರ ಬೆಂಗಳೂರಿಗೆ ತೆರಳಬೇಕಿದ್ದ ಅವರು ತಮ್ಮ ಪ್ರವಾಸ ಮೊಟಕುಗೊಳಿಸಿ, ಗುರುವಾರ ರಾತ್ರಿಯೇ ಆ್ಯಮ್‌ಸ್ಟರ್‌ಡ್ಯಾಮ್‌ಗೆ ಮರಳಿದ್ದಾರೆ.

ಬೆಂಗಳೂರಿನಲ್ಲಿ ಶೆಲ್ ಟೆಕ್ನಾಲಜಿ ಸೆಂಟರ್ ಹಾಗೂ ಇಸ್ರೊಗೆ ಅವರು ಭೇಟಿ ನೀಡಬೇಕಿತ್ತು. ಸ್ನಾತಕೋತ್ತರ ಹಾಗೂ ಸಂಶೋಧನಾ ವಿದ್ಯಾರ್ಥಿಗಳು, ಯುವ ನಾಯಕರು ಮತ್ತು ಉದ್ಯಮಿಗಳ ಜೊತೆ ಅವರು ಸಂವಾದ ನಡೆಸಬೇಕಿತ್ತು.

ಮಲೇಷಿಯನ್ ಏರ್‌ಲೈನ್ಸ್ ವಿಮಾನ ಅಪಘಾತಕ್ಕೆ ಬಳಸಿದ ಕ್ಷಿಪಣಿಯನ್ನು ಪತ್ತೆಹಚ್ಚಿರುವುದಾಗಿ ತನಿಖಾಧಿಕಾರಿಗಳು ಹೇಳಿದ್ದು, ತುರ್ತು ಸಂಪುಟ ಸಭೆ ನಡೆಸುವ ಸಲುವಾಗಿ ರೊಟ್ಟೆ ಅವರು ಸ್ವದೇಶಕ್ಕೆ ಮರಳಿದ್ದಾರೆ.

2014ರಲ್ಲಿ ಉಕ್ರೇನ್‌ನಲ್ಲಿ ಅಪಘಾತಕ್ಕೀಡಾದ ವಿಮಾನದಲ್ಲಿದ್ದ ಬಹುತೇಕರು ನೆದರ್ಲೆಂಡ್ಸ್‌ಗೆ ಸೇರಿದವರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry