8 ಸಾವಿರ ಮೀ. ಎತ್ತರದ ಪರ್ವತ ಏರಿದ ಅರ್ಜುನ್‌

6
ಆರು ಪರ್ವತ ಏರಿದ ಜಗತ್ತಿನ ಕಿರಿಯ ಎಂಬ ಖ್ಯಾತಿ

8 ಸಾವಿರ ಮೀ. ಎತ್ತರದ ಪರ್ವತ ಏರಿದ ಅರ್ಜುನ್‌

Published:
Updated:
8 ಸಾವಿರ ಮೀ. ಎತ್ತರದ ಪರ್ವತ ಏರಿದ ಅರ್ಜುನ್‌

ಕಠ್ಮಂಡು : ಕಾಂಚನಜುಂಗಾ ಏರುವ ಮೂಲಕ 8 ಸಾವಿರ ಮೀಟರ್ ಎತ್ತರದ ಆರು ಪರ್ವತಗಳನ್ನು ಏರಿದ ಜಗತ್ತಿನ ಅತ್ಯಂತ ಕಿರಿಯ ಪರ್ವತಾರೋಹಿ ಎಂಬ ಕೀರ್ತಿಗೆ ಭಾರತದ ಅರ್ಜುನ್‌ ವಾಜ್ಪೈ ಪಾತ್ರರಾಗಿದ್ದಾರೆ.

’ಮೌಂಟೇನ್ ಡ್ಯೂ ಇಂಡಿಯಾ ಸಂಸ್ಥೆಯ ನೆರವಿನೊಂದಿಗೆ ಈ ಸಾಹಸ ಯಾತ್ರೆ ಕೈಗೊಂಡಿದ್ದೆ. ಜಗತ್ತಿನಲ್ಲಿರುವ 8 ಸಾವಿರ ಮೀಟರ್‌ ಎತ್ತರದ ಎಲ್ಲ 14 ಪರ್ವತಗಳನ್ನು ಏರಿದ ನಂತರವಷ್ಟೇ ನನಗೆ ಪರ್ವತಾರೋಹಣದ ಗ್ರ್ಯಾಂಡ್‌ ಸ್ಲ್ಯಾಂ ಜಯಿಸಿದ ತೃಪ್ತಿ ಸಿಗಲಿದೆ’ ಎಂದು ನೊಯ್ಡಾ ಮೂಲದ ಅರ್ಜುನ್‌ ತಿಳಿಸಿದ್ದಾರೆ.

‘ಪರ್ವತ ಏರುವ ಮಾರ್ಗದುದ್ದಕ್ಕೂ ಹವಾಮಾನ ವೈಪರೀತ್ಯ ಕಾಡಿತು. ಹವಾಮಾನ ತಜ್ಞರು ನೀಡುತ್ತಿದ್ದ ಮುನ್ಸೂಚನೆ ಹಾಗೂ ವಾಸ್ತವಕ್ಕೂ ಯಾವುದೇ ಸಾಮ್ಯತೆಯೇ ಇರುತ್ತಿರಲಿಲ್ಲ. ಆದರೆ, ಷೆರ್ಪಾಗಳು ಮತ್ತು ತಂಡದ ಸದಸ್ಯರ ನಡುವಿನ ಸಮನ್ವಯ, ಇಡೀ ಸಾಹಸ ಯಾತ್ರೆಯನ್ನು ಚಿತ್ರೀಕರಣ ಮಾಡಿದ ಗೆಳೆಯ ಅಲೆಕ್ಸ್‌ ಒದಗಿಸಿದ ಸಹಾಯ ನನ್ನ ನೈತಿಕ ಸ್ಥೈರ್ಯ ಹೆಚ್ಚಿಸಿತ್ತು’ ಎಂದು ಅರ್ಜುನ್‌ ಹೇಳಿದ್ದಾರೆ.

‘ಅರ್ಜುನ್‌ ಸಾಹಸ ಗಾಥೆಯನ್ನು ದೇಶದ ಯುವಕರೊಂದಿಗೆ ಹಂಚಿಕೊಳ್ಳಲಾಗುವುದು. ಆ ಮೂಲಕ ಇಂತಹ ಸಾಹಸಕ್ಕೆ ಮುಂದಾಗುವಂತೆ ಯುವ ಜನತೆಯನ್ನು ಪ್ರೇರೇಪಿಸುವುದು ನಮ್ಮ ಗುರಿ’ ಎಂದು ಮೌಂಟೇನ್‌ ಡ್ಯೂ ಸಂಸ್ಥೆಯ ನಿರ್ದೇಶಕಿ ನಸೀಬ್ ಪುರಿ ಹೇಳಿದ್ದಾರೆ.

ಹತ್ತು ವರ್ಷದ ಬಾಲಕನಿದ್ದಾಗಲೇ ಅರ್ಜುನ್‌ ಪರ್ವತಗಳನ್ನು ಏರುವ ಸಾಹಸ ಕೈಗೊಂಡಿದ್ದರು. 2010ರಲ್ಲಿ ಮೌಂಟ್‌ ಎವರೆಸ್ಟ್‌ನ 8,848 ಮೀಟರ್‌, 2011ರಲ್ಲಿ ಮೌಂಟ್‌ ಮಾನಸ್ಲು ಪರ್ವತದ 8,163 ಮೀಟರ್‌  ಮತ್ತು ಮೌಂಟ್‌ ಲ್ಹೊತ್ಸೆಯ 8,516 ಮೀಟರ್‌ ಹಾಗೂ 2016ರಲ್ಲಿ ಮೌಂಟ್‌ ಮಕಲು ಪರ್ವತದ 8,486 ಮೀಟರ್‌ ಮತ್ತು ಮೌಂಟ್‌ ಚೊ ಒಯು ಪರ್ವತವನ್ನು 8,201 ಮೀಟರ್‌ ಎತ್ತರವರೆಗೆ ಅರ್ಜುನ್‌ ಏರಿದ್ದಾರೆ.

**

24 ವರ್ಷದ ಅರ್ಜುನ್‌, 8,586 ಮೀಟರ್‌ ಎತ್ತರದ ಕಾಂಚನಜುಂಗಾ ಪರ್ವತವನ್ನು ಮೇ 20ರಂದು ಯಶಸ್ವಿಯಾಗಿ ಏರಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry