ಸಾಲಮನ್ನಾ: ರೈತಸಂಘ ಆಗ್ರಹ

7

ಸಾಲಮನ್ನಾ: ರೈತಸಂಘ ಆಗ್ರಹ

Published:
Updated:

ಹಗರಿಬೊಮ್ಮನಹಳ್ಳಿ: ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಚುನಾವಣೆಗೂ ಮುನ್ನ ನೀಡಿದ ಭರವಸೆಯಂತೆ ರೈತರ ಸಾಲಮನ್ನಾ ಮಾಡಬೇಕು ಎಂದು ರಾಜ್ಯ ರೈತ ಸಂಘದ ಗೌರವ ಅಧ್ಯಕ್ಷ ಜೆ.ಎಂ.ವೀರಸಂಗಯ್ಯ ಆಗ್ರಹಿಸಿದರು.

ಇಲ್ಲಿನ ತಹಶೀಲ್ದಾರ್ ಕಚೇರಿ ಎದುರು ಶುಕ್ರವಾರ ರಾಜ್ಯ ರೈತಸಂಘ ಮತ್ತು ಹಸಿರುಸೇನೆಯ ಪದಾಧಿಕಾರಿಗಳು ರಾಜ್ಯ ರೈತರ ಸಾಲಮನ್ನಾಕ್ಕೆ ಆಗ್ರಹಿಸಿ ನಡೆಸಿದ ಧರಣಿಯಲ್ಲಿಅವರು ಮಾತನಾಡಿದರು.

‘ಜೂನ್‌ 1ರ ಒಳಗಾಗಿ ಸಾಲಮನ್ನಾ ಮಾಡದಿದ್ದರೆ ವಿಧಾನಸೌಧಕ್ಕೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಗುವುದು ಎಂದು ಅವರು ಎಚ್ಚರಿಸಿದರು.

ಸಂಘದ ಜಿಲ್ಲಾ ಸಂಚಾಲಕ ಬಿ.ಗೋಣಿಬಸಪ್ಪ, ತಾಲ್ಲೂಕು ಘಟಕದ ಉಪಾಧ್ಯಕ್ಷ ಎಂ.ಸೋಮಪ್ಪ, ಮುಖಂಡರಾದ ಆಂಜನೇಯ ರೆಡ್ಡಿ, ಕೊಟ್ರೇಶ್, ಸೂರ್ಯಬಾಬು, ಆರ್.ಸಿದ್ದರೆಡ್ಡಿ, ಜೆ.ಎಂ.ವೃಷಬೇಂದ್ರಯ್ಯ, ಕಾಳಪ್ಪ, ಗುರುವಪ್ಪ, ಭೀಮಪ್ಪ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry