‘ತಿದ್ದುಪಡಿ ಕಾನೂನಿಗೆ ಮಗಳ ಹೆಸರು ಇಡಲಿ’

7

‘ತಿದ್ದುಪಡಿ ಕಾನೂನಿಗೆ ಮಗಳ ಹೆಸರು ಇಡಲಿ’

Published:
Updated:
‘ತಿದ್ದುಪಡಿ ಕಾನೂನಿಗೆ ಮಗಳ ಹೆಸರು ಇಡಲಿ’

ಬೆಳಗಾವಿ: ‘ಗರ್ಭಪಾತ ನಿಷೇಧ ಕಾನೂನನ್ನು ಹಿಂದಕ್ಕೆ ಪಡೆಯಲು ಐರ್ಲೆಂಡ್‌ ಜನರು ಜನಮತದ ಮೂಲಕ ಬೆಂಬಲ ಸೂಚಿಸಿರುವುದು ಸಂತಸ ತಂದಿದೆ. ಇದಕ್ಕೆ ನಾನು ಆ ದೇಶದ ಜನರಿಗೆ ಚಿರಋಣಿಯಾಗಿದ್ದೇನೆ’ ಎಂದು ಇಲ್ಲಿನ ನಿವೃತ್ತ ಎಂಜಿನಿಯರ್‌ ಅಂದಾನೆಪ್ಪ ಯಾಳಗಿ ಹೇಳುತ್ತಾರೆ.

‘ನನ್ನ ಮಗಳಿಗೆ ಆದ ಗತಿ ಇನ್ನೊಬ್ಬರಿಗೆ ಆಗಬಾರದೆಂದು ಆರು ವರ್ಷಗಳಿಂದ ನಡೆಸಿದ ಹೋರಾಟಕ್ಕೆ ಜಯ ಸಿಕ್ಕಿದೆ. ತಿದ್ದುಪಡಿ ಕಾನೂನಿಗೆ ಸವಿತಾ ಹಾಲಪ್ಪನವರ ಹೆಸರು ಇಡುವಂತೆ ಆ ದೇಶದ ಸಂಸದರನ್ನು ಕೋರುತ್ತೇನೆ’ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಸವಿತಾ ಸಾವಿನ ನಂತರ ಅಲ್ಲಿನ ಹಲವು ಪತ್ರಕರ್ತರು, ಸಾರ್ವಜನಿಕರು ನಮ್ಮ ಜೊತೆ ನಿರಂತರ ಸಂಪರ್ಕದಲ್ಲಿದ್ದರು. ಅವರಿಗೆ ಎಲ್ಲ ರೀತಿಯ ಮಾಹಿತಿ ನೀಡಿದೆವು. ಹೋರಾಟಕ್ಕೆ ಬಲ ತುಂಬಿದೆವು’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry