ಸ್ವಚ್ಛ ರೈಲು ನಿಲ್ದಾಣ: ಬೆಂಗಳೂರಿಗೆ ಸ್ಥಾನ

7

ಸ್ವಚ್ಛ ರೈಲು ನಿಲ್ದಾಣ: ಬೆಂಗಳೂರಿಗೆ ಸ್ಥಾನ

Published:
Updated:
ಸ್ವಚ್ಛ ರೈಲು ನಿಲ್ದಾಣ: ಬೆಂಗಳೂರಿಗೆ ಸ್ಥಾನ

ಬೆಂಗಳೂರು: ದೇಶದ ಮೊದಲ ಹತ್ತು ಸ್ವಚ್ಛ ರೈಲು ನಿಲ್ದಾಣಗಳ ಪೈಕಿ ಬೆಂಗಳೂರು ನಗರದ ರೈಲು ನಿಲ್ದಾಣ ಸ್ಥಾನ ಪಡೆದಿದೆ.

ಸ್ವಚ್ಛ ಭಾರತ ಅಭಿಯಾನದ ಅಡಿ ಹಮ್ಮಿಕೊಳ್ಳಲಾದ ಸ್ವಚ್ಛತೆ ನಿರ್ವಹಣಾ ಕ್ರಮಗಳ ಕುರಿತು ಮೂರನೇ ಸಂಸ್ಥೆ ನಡೆಸಿದ ಮೌಲ್ಯಮಾಪನ, ಪ್ರಯಾಣಿಕರಿಂದ ಪಡೆದ ಮಾಹಿತಿ ಆಧಾರದಲ್ಲಿ ರ‍್ಯಾಂಕಿಂಗ್‌ ನೀಡಲಾಗಿದೆ.

ರೈಲ್ವೆಯ ಆಹಾರ ಮತ್ತು ಪ್ರವಾಸೋದ್ಯಮ ನಿಗಮವು (ಐಆರ್‌ಸಿಟಿಸಿ) ಸ್ವಚ್ಛತೆ ಸಂಬಂಧಿಸಿದಂತೆ ಸಮೀಕ್ಷೆ ನಡೆಸಿದೆ. ಎರಡನೇ ಸಮೀಕ್ಷೆಯನ್ನು ಭಾರತೀಯ ಗುಣಮಟ್ಟ ಪ್ರಾಧಿಕಾರ (ಕ್ವಾಲಿಟಿ ಕೌನ್ಸಿಲ್‌ ಆಫ್‌ ಇಂಡಿಯಾ) ತನ್ನ ಸಹಯೋಗಿ ಸಂಸ್ಥೆಗಳ ಮೂಲಕ ನಡೆಸಿದೆ.

ನಿಲ್ದಾಣ ಪ್ರದೇಶದ ವಾಹನ ನಿಲುಗಡೆ, ಮುಖ್ಯ ಪ್ರವೇಶದ್ವಾರ, ಮುಖ್ಯ ಪ್ಲ್ಯಾಟ್‌ ಫಾರಂ, ನಿರೀಕ್ಷಣಾ ಕೊಠಡಿ, ಶೌಚಾಲಯ ಕುಳಿತುಕೊಳ್ಳುವ ಸ್ಥಳ, ಕುಡಿಯುವ ನೀರಿನ ಬೂತ್‌, ರೈಲ್ವೆ ಹಳಿಗಳು, ಮೇಲು ಸೇತುವೆ ಇತ್ಯಾದಿ ಪರಿಶೀಲಿಸಲಾಯಿತು. ಇವುಗಳ ಪ್ರಗತಿಯನ್ನು ಪರಿಶೀಲಿಸಲು 24 ತಾಸು ನಿಗಾ ವಹಿಸುವ ನಿಯಂತ್ರಣ ಕೇಂದ್ರವನ್ನೂ ಅಲ್ಲಲ್ಲಿ ತೆರೆಯಲಾಗಿತ್ತು. ಸಮೀಕ್ಷಾ ತಂಡಗಳು ರೈಲ್ವೆಯ 16 ವಲಯಗಳ 407 ನಿಲ್ದಾಣಗಳಿಗೆ ಭೇಟಿ ನೀಡಿ ಪ್ರಯಾಣಿಕರನ್ನು ಪ್ರಶ್ನಾವಳಿ ಮೂಲಕ ಸಂದರ್ಶಿಸಿ 40 ವಿವಿಧ ಮಾನದಂಡಗಳಿಗೆ ಶ್ರೇಣಿ ನೀಡಲು ಕೋರಲಾಯಿತು. ಈ ರೀತಿಯ ಸಮೀಕ್ಷೆ

ಯಲ್ಲಿ ಬೆಂಗಳೂರಿನ ನಿಲ್ದಾಣ ಸ್ಥಾನ ಪಡೆದಿದೆ.

ಸ್ವಚ್ಛತೆಗೆ ನೈಋತ್ಯ ರೈಲ್ವೆ ಕ್ರಮ: ಬೆಂಗಳೂರು, ಮೈಸೂರು ಮತ್ತು ಹುಬ್ಬಳ್ಳಿ ವೃತ್ತಗಳಲ್ಲಿ ಪರಿಸರ ಮತ್ತು ನಿರ್ವಹಣೆ ವಿಭಾಗಕ್ಕೆ ಚಾಲನೆ ನೀಡಲಾಗಿದೆ. ಎಲ್ಲ ಪ್ರಮುಖ ನಿಲ್ದಾಣಗಳಲ್ಲಿ ಯಾಂತ್ರೀಕೃತ ಸ್ವಚ್ಛತೆ ಆರಂಭಿಸಲಾಗಿದೆ. 92 ರೈಲುಗಳಲ್ಲಿ ಆನ್‌ಬೋರ್ಡ್‌ ನಿರ್ವಹಣೆ ಆರಂಭಿಸಲಾಗಿದೆ. ಪ್ರಯಾಣಿಕರು ಎಸ್‌ಎಂಎಸ್‌ ರವಾನಿಸಿ ಸ್ವಚ್ಛತೆ ಸಮಸ್ಯೆ ಇದ್ದಲ್ಲಿ ಗಮನಕ್ಕೆ ತರಬಹುದು.

ವಿಭಾಗದ ಶೇ 70ರಷ್ಟು ಕೋಚ್‌ಗಳಲ್ಲಿ ಪರಿಸರಸ್ನೇಹಿ ಶೌಚಾಲಯ ಅಳವಡಿಸಲಾಗಿದೆ. ಆಗಾಗ ಸ್ವಚ್ಛತಾ ಅಭಿಯಾನ ಮಾಡಲಾಗುತ್ತಿದೆ. ವಿಶೇಷ ಸ್ವಚ್ಛತಾ ತಪಾಸಣೆ ಮಾಡಲಾಗುತ್ತಿದೆ ಎಂದು ಇಲಾಖೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೊದಲ 10 ರ‍್ಯಾಂಕ್‌ ಪಡೆದ ನಿಲ್ದಾಣಗಳು

1. ವಿಶಾಖಪಟ್ಟಣ

2. ಸಿಕಂದರಾಬಾದ್‌, ತೆಲಂಗಾಣ

3. ಜಮ್ಮು ತಾವಿ, ಜಮ್ಮು ಕಾಶ್ಮೀರ

4. ವಿಜಯವಾಡ, ಆಂಧ್ರಪ್ರದೇಶ

5. ಆನಂದವಿಹಾರ್‌ ಟರ್ಮಿನಲ್‌, ದೆಹಲಿ

6. ಲಖನೌ, ಉತ್ತರ ಪ್ರದೇಶ

7. ಅಹಮದಾಬಾದ್‌

8. ಜೈಪುರ, ರಾಜಸ್ಥಾನ

9. ಪುಣೆ, ಕೇಂದ್ರ ರೈಲ್ವೆ ಮಹಾರಾಷ್ಟ್ರ

10. ಬೆಂಗಳೂರು ನಗರ ನಿಲ್ದಾಣ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry