ಗಮನ ಬೇರೆಡೆ ಸೆಳೆದು ಕಳವು

7

ಗಮನ ಬೇರೆಡೆ ಸೆಳೆದು ಕಳವು

Published:
Updated:

ಬೆಂಗಳೂರು: ಬ್ಯಾಂಕ್‌ನಿಂದ ಹಣ ಪಡೆದು ಹೋಗುತ್ತಿದ್ದ ವ್ಯಕ್ತಿಯೊಬ್ಬರ ಗಮನ ಬೇರೆಡೆ ಸೆಳೆದು ₹40 ಸಾವಿರ, ಮೊಬೈಲ್‌ ಫೋನ್‌, ಬ್ಯಾಂಕ್‌ನ ದಾಖಲೆಗಳನ್ನು ಕಳವು ಮಾಡಿದ ಪ್ರಕರಣ ಜಯನಗರದ 5ನೇ ಬ್ಲಾಕ್‌ನಲ್ಲಿ ನಡೆದಿದೆ.

ಈ ಬಗ್ಗೆ ರಾಮಕೃಷ್ಣ ಮಠ ಬಡಾವಣೆ, ಕೆಂಪೇಗೌಡ ನಗರದ ನಿವಾಸಿ ಚಂದ್ರಶೇಖರ್‌ ಅವರು ಜಯನಗರ ಪೊಲೀಸರಿಗೆ ದೂರು ನೀಡಿದ್ದಾರೆ.

ಬಿಟಿಎಂ ಬಡಾವಣೆಯಲ್ಲಿರುವ ಕರ್ಣಾಟಕ ಬ್ಯಾಂಕ್‌ಗೆ ಹೋಗಿದ್ದ ಚಂದ್ರಶೇಖರ್‌ ಅವರು ₹40 ಸಾವಿರ ಡ್ರಾ ಮಾಡಿಕೊಂಡು ಬೈಕ್‌ನಲ್ಲಿ ಹೊರಟಿದ್ದು, ಮಳೆ ಬರುತ್ತಿದ್ದ ಕಾರಣ ನಗದು, ಮೊಬೈಲ್‌, ಚೆಕ್‌ಬುಕ್‌ ಮತ್ತು ಪಾಸ್‌ಬುಕ್‌ ಅನ್ನು ಬೈಕ್‌ನ ಡಿಕ್ಕಿಯಲ್ಲಿ ಇಟ್ಟಿದ್ದೆ ಎಂದು ತಿಳಿಸಿದ್ದಾರೆ.

‘ಬಿಟಿಎಂ ಬಡಾವಣೆಯಿಂದ ಜಯನಗರ 5ನೇ ಬ್ಲಾಕ್‌ನ 7ನೇ ಮುಖ್ಯ ರಸ್ತೆ, 38ನೇ ಕ್ರಾಸ್‌ನಲ್ಲಿ ಹೋಗುತ್ತಿದ್ದಾಗ ಬೈಕ್‌ನಲ್ಲಿ ಬಂದ ಇಬ್ಬರು ಅಪರಿಚಿತ ವ್ಯಕ್ತಿಗಳು ಪರ್ಸ್‌ ಬಿದ್ದಿರುವುದಾಗಿ ತಿಳಿಸಿದರು. ಬೈಕ್‌ ನಿಲ್ಲಿಸಿ, ಪರ್ಸ್‌ ತರಲು ಹೋಗಿ ಬರುವುದರೊಳಗೆ ನಗದು, ಮೊಬೈಲ್‌ ಹಾಗೂ  ಬ್ಯಾಂಕ್‌ ದಾಖಲೆಗಳನ್ನು ಕಳವು ಮಾಡಿಕೊಂಡು ಹೋಗಿದ್ದಾರೆ‘ ಎಂದು ಅವರು ದೂರಿನಲ್ಲಿ ವಿವರಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry