ಸಾಲಮನ್ನಾ ಮಾಡಲು ಆಗುವುದಿಲ್ಲ ಎಂದು ಕುಮಾರಸ್ವಾಮಿ ಹೇಳಿರುವುದು ಪಲಾಯನವಾದ

7

ಸಾಲಮನ್ನಾ ಮಾಡಲು ಆಗುವುದಿಲ್ಲ ಎಂದು ಕುಮಾರಸ್ವಾಮಿ ಹೇಳಿರುವುದು ಪಲಾಯನವಾದ

Published:
Updated:
ಸಾಲಮನ್ನಾ ಮಾಡಲು ಆಗುವುದಿಲ್ಲ ಎಂದು ಕುಮಾರಸ್ವಾಮಿ ಹೇಳಿರುವುದು ಪಲಾಯನವಾದ

ಹುಬ್ಬಳ್ಳಿ: ‘ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ 24 ಗಂಟೆಗಳಲ್ಲಿ ರೈತರ ಸಾಲಮನ್ನಾ ಮಾಡುತ್ತೇನೆ’ ಎಂದು ಹೇಳಿಕೆ ನೀಡಿದ್ದ ಎಚ್‌.ಡಿ. ಕುಮಾರಸ್ವಾಮಿ ಅವರು ಪೂರ್ಣ ಬಹುಮತ ಬಂದ್ರೆ ರೈತರ ಸಾಲಮನ್ನಾ ಎಂದಿದ್ದೆ, ಈಗ ಸಾಲಮನ್ನಾ ಮಾಡಲು ಆಗುವುದಿಲ್ಲ. ನನಗೆ ಬಹುಮತ ಇಲ್ಲ . ಅದಕ್ಕಾಗಿ ಸಮಾಲೋಚನೆ ಮಾಡಬೇಕು, ತಕ್ಷಣ ಸಾಲಮನ್ನಾ ಮಾಡಲು ಆಗುವುದಿಲ್ಲ ಎಂದು ಹೇಳಿರುವುದು ಪಲಾಯನವಾದ ಎಂದು ಜಗದೀಶ ಶೆಟ್ಟರ್ ವಾಗ್ದಾಳಿ ನಡೆಸಿದ್ದಾರೆ.

ಚುನಾವಣೆ ಬಂದಾಗ ರೈತರ ಜನರ ಮತ ಪಡೆಯುವುದಕ್ಕಾಗಿ ಏನೆಲ್ಲಾ ಸುಳ್ಳುಗಳನ್ನು ಹೇಳಿದರು. ಚುನಾವಣೆಯಲ್ಲಿ 37 ಸೀಟುಗಳು ಬಂದುವು.

ಇವತ್ತು ಕುಮಾರಸ್ವಾಮಿ ಅವರು ಒಂದು ಮಾತು ಹೇಳಿದ್ದಾರೆ ನಾನು ಆರೂವರೆ ಕೋಟಿ ಕನ್ನಡಿಗರ ಮುಲಾಜಿನಲ್ಲಿಲ್ಲ, ಕಾಂಗ್ರೆಸ್ ಮುಲಾಜಿನಲ್ಲಿದ್ದೇನೆ ಹಾಗಾಗಿ ಸಾಲಮನ್ನಾ ಮಾಡಲಾಗುವುದಿಲ್ಲ ಎಂದು. ನಮಗೆ ಜನಾದೇಶ ಇಲ್ಲ ಎಂದು ಅವರು ಹೇಳಿರುವುದು ರೈತರಿಗೆ ದ್ರೋಹ ಮಾಡಿದಂತೆ. ಕರ್ನಾಟಕದ ಜನತೆ  ಆಶೀರ್ವಾದ ಮಾಡಿಲ್ಲ ಎಂದಾದರೆ ನೀವು ಯಾವ ನೈತಿಕತೆ ಇಟ್ಟುಕೊಂಡು ಮುಖ್ಯಮಂತ್ರಿ ಸ್ಥಾನದಲ್ಲಿದ್ದೀರಿ? ಎಂದು ಕೇಳಬೇಕಾಗುತ್ತದೆ ಎಂದಿದ್ದಾರೆ ಶೆಟ್ಟರ್.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry