ಬೆಲೆ ಸಿಗದಿದ್ದರೆ...?

7

ಬೆಲೆ ಸಿಗದಿದ್ದರೆ...?

Published:
Updated:

‘ಸ್ವಾಭಿಮಾನಿಗಳಾದ ರೈತರು ಸರ್ಕಾರ ಕೊಡುವ ಸಾಲ ಮನ್ನಾದ ಹಣವನ್ನು ವಿಧಾನಸೌಧಕ್ಕೆ ಎಸೆದು ಬರುವ ಧೈರ್ಯ ತೋರಬೇಕಾಗುತ್ತದೆ’ ಎಂದಿದ್ದಾರೆ ಡಾ. ಶಿವಮೂರ್ತಿ ಮುರುಘಾ ಶರಣರು (ಸಂಗತ, ಮೇ 23). ಸರಿಯೇ. ಆದರೆ ರೈತರು ಬೆಳೆದ ಬೆಳೆಗೆ ನ್ಯಾಯ ಸಮ್ಮತವಾದ, ವೈಜ್ಞಾನಿಕ ಬೆಂಬಲ ಬೆಲೆಯೇ ಸಿಗದಿರುವಾಗ ಇದು ಅಸಾಧ್ಯ. ರೈತ ತಾನು ನಂಬಿದ ಭೂಮಿಯನ್ನೂ ಕೈಬಿಡಬಾರದೆಂದೇ, ಸಾಲವನ್ನಾದರೂ ಮಾಡಿ ಬಿತ್ತಿ ಬೆಳೆಯುತ್ತಾನೆ. ಆದರೆ ಸಮಸ್ಯೆ ಉದ್ಭವಿಸುವುದೇ ಮಾರುಕಟ್ಟೆಯಲ್ಲಿ. ಈ ಮರ್ಮ ಯಾವ ರಾಜಕಾರಣಿಗೆ ಅರ್ಥವಾಗಿಲ್ಲ ಹೇಳಿ? ಆದರೂ ಅವರೆಲ್ಲ ಏನನ್ನೂ ಮಾಡದೆ ರೈತರನ್ನು ಆತ್ಮಹತ್ಯೆಗೆ ತಳ್ಳುತ್ತಿದ್ದಾರೆ!

ಹೀಗಾಗಿ ‘ರೈತರ ಆತ್ಮಹತ್ಯೆ ನಿಜಕ್ಕೂ ಆತ್ಮಹತ್ಯೆಗಳಲ್ಲ, ಅವು ಹೃದಯಹೀನ ಸರ್ಕಾರಗಳ ಕೊಲೆಗಳು’ ಎಂಬ ಜಾಗೃತಿ ರೈತರಲ್ಲಿ ಹುಟ್ಟುತ್ತಿದೆ. ಇದು ನಿಜಕ್ಕೂ ಶೋಚನೀಯ.

-ಹುರುಕಡ್ಲಿ ಶಿವಕುಮಾರ, ಬಾಚಿಗೊಂಡನಹಳ್ಳಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry