ಮಕ್ಕಳ ನಿಗಾ ಇಡಲು ಸ್ಮಾರ್ಟ್ ವಾಚ್‌

7

ಮಕ್ಕಳ ನಿಗಾ ಇಡಲು ಸ್ಮಾರ್ಟ್ ವಾಚ್‌

Published:
Updated:
ಮಕ್ಕಳ ನಿಗಾ ಇಡಲು ಸ್ಮಾರ್ಟ್ ವಾಚ್‌

ಮಕ್ಕಳು ಅಂತರ್ಜಾಲವನ್ನು ದುರುಪಯೋಗಪಡಿಸಿಕೊಳ್ಳದಂತೆ ನಿಗಾ ವಹಿಸಲು ಮತ್ತು ಮಕ್ಕಳ ಸುರಕ್ಷತೆಗಾಗಿ ರಿವರ್‌ಸಾಂಗ್ ಸಂಸ್ಥೆ ಸ್ಮಾರ್ಟ್‌ವಾಚ್ ಅಭಿವೃದ್ಧಿಪಡಿಸಿದೆ.

ಹಲವು ವಿಶೇಷತೆಗಳನ್ನು ಒಳಗೊಂಡಿರುವ ಈ ಗಡಿಯಾರದಲ್ಲಿ ‘ಆಟೊ ಕಾಲ್‌’ ಆಯ್ಕೆ ಇದೆ. ಇದರಿಂದ ಮಗು ಇರುವ ಸುತ್ತಮುತ್ತಲಿನ ಪರಿಸರದಲ್ಲಾಗುವ ಘಟನೆಗಳ ಬಗ್ಗೆ ಮಗುವಿಗೆ ಗೊತ್ತಾಗದಂತೆ ಕೇಳಿಸಿಕೊಳ್ಳಬಹುದು.

ವಾಯಿಸ್‌ ಕಾಲ್ ಮತ್ತು ಮೆಸೇಜ್‌ ಸೌಲಭ್ಯವೂ ಇರುವುದರಿಂದ ಮಗುವಿನೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿ ಇರಬಹುದು. ಇದರಲ್ಲಿ ಅಳವಡಿಸುವ ಮೊಬೈಲ್‌ಫೋನ್‌ ಸಂಖ್ಯೆಗಳನ್ನು ಮೊದಲೇ ಮಾನ್ಯ ಮಾಡಿರದಿದ್ದರೆ, ಅಂತಹ ಸಂಖ್ಯೆಗಳಿಗೆ ಕರೆ ಮಾಡಲು ಆಗುವುದಿಲ್ಲ. 

ಇದಲ್ಲದೇ, ಜಿಯೊ–ಫೆನ್ಸಿಂಗ್, ಟ್ರಿಪಲ್ ಟ್ರ್ಯಾಕಿಂಗ್ ಮೆಕ್ಯಾನಿಸಂ ಸೌಲಭ್ಯವೂ ಈ ಸ್ಮಾರ್ಟ್‌ವಾಚ್‌ನಲ್ಲಿದೆ. ಜಿಪಿಎಸ್‌, ಎಲ್‌ಪಿಎಸ್‌ ಮತ್ತು ವೈಫೈ ಸೌಲಭ್ಯಗಳನ್ನು ಅಳವಡಿಸಲಾಗಿದೆ.

ಸ್ಥಳ ಪತ್ತೆ, ಮಗು ತಿರುಗಾಡಿದ ಪ್ರದೇಶವನ್ನು ಆಗಾಗ್ಗೆ ತಿಳಿದುಕೊಳ್ಳುವುದು, ಎಸ್‌ಒಎಸ್ ಅಲಾರಂ ಸೌಲಭ್ಯವೂ ಇದೆ. ಐಒಎಸ್ ಮತ್ತು ಆಂಡ್ರಾಯ್ಡ್–ಜೆಲ್ಲಿ ತಂತ್ರಾಂಶಗಳ ಎರಡೂ ಮಾದರಿಗಳಲ್ಲಿ ಬಳಸಿಕೊಳ್ಳಬಹುದು.

ಅಂತರ್ಜಾಲವು ಎಲ್ಲರಿಗೂ ಹಲವಾರು ರೀತಿಯಲ್ಲಿ ನೆರವಾಗುತ್ತದೆ. ಅದರಲ್ಲೂ ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚು ಅನುಕೂಲ. ಆದರೆ ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಅವರು ಅಂತರ್ಜಾಲವನ್ನು ಎಷ್ಟು ಹೊತ್ತು ಬಳಸುತ್ತಿದ್ದಾರೆ ಎಂಬುದನ್ನು ಪಾಲಕರು ಗಮನಿಸಬೇಕು. ಇತ್ತೀಚಿನ ದಿನಗಳಲ್ಲಿ ಶಾಲೆಯಲ್ಲಿ ಮತ್ತು ಶಾಲೆಯ ಹೊರಗೆ ಮಕ್ಕಳ ಮೇಲೆ ಆಗುತ್ತಿರುವ ದೌರ್ಜನ್ಯ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಇಂತಹ ನಿಗಾದ ಅಗತ್ಯ ಹೆಚ್ಚಿದೆ.

ಎಲ್ಲಾ ಪೋಷಕರೂ ತಮ್ಮ ಮಕ್ಕಳ ಸುರಕ್ಷತೆ ಬಗ್ಗೆಯೇ ಹೆಚ್ಚು ಯೋಚಿಸುತ್ತಾರೆ. ಅಂಥವರಿಗೆ ರಿವರ್‌ಸಾಂಗ್ ನೆರವಾಗಲಿದೆ. ಇದರ ಸಹಾಯದಿಂದ ಅಗತ್ಯವೆನಿಸಿದಾಗ ಮಗುವಿನೊಂದಿಗೆ ಮಾತನಾಡಿಸಬಹುದು. ಇದನ್ನು ಸ್ಮಾರ್ಟ್‌ಫೋನ್‌ಗೆ ಜೋಡಿಸಿದರೆ ಮಗು ಎಲ್ಲಿದ್ದರೂ, ಯಾವ ಚಟುವಟಿಕೆಯಲ್ಲಿ ತೊಡಗಿದ್ದರೂ ಗೊತ್ತಾಗುತ್ತದೆ.

‘ಹಲವು ಪೋಷಕರಿಗೆ ತಮ್ಮ ಮಕ್ಕಳ ಮೇಲೆ ನಿರಂತರವಾಗಿ ನಿಗಾ ಇಡಲು ಸಾಧ್ಯವಾಗುವುದಿಲ್ಲ. ಹೀಗಾಗಿ ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳುತ್ತಿಲ್ಲ ಎಂಬ ಕೊರಗು ಅವರಲ್ಲಿ ಇದ್ದೇ ಇರುತ್ತದೆ. ಇದನ್ನು ದೃಷ್ಟಿಯಲ್ಲಿಟ್ಟುಕೊಂಡೇ ಈ ಸ್ಮಾರ್ಚ್‌ವಾಚ್‌ ಅಭಿವೃದ್ಧಿಪಡಿಸಲಾಗಿದೆ’ ಎಂದು  ಸಂಸ್ಥೆಯ ವ್ಯಾಪಾರ ಮುಖ್ಯಸ್ಥ ಗುರುಬಿಂದರ್‌ಸಿಂಗ್‌ ಹೇಳುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry