ನಿರ್ಮಲಾ ಶೆರಾನ್‌ ಅರ್ಜಿ ತಿರಸ್ಕೃತ

7

ನಿರ್ಮಲಾ ಶೆರಾನ್‌ ಅರ್ಜಿ ತಿರಸ್ಕೃತ

Published:
Updated:
ನಿರ್ಮಲಾ ಶೆರಾನ್‌ ಅರ್ಜಿ ತಿರಸ್ಕೃತ

ನವದೆಹಲಿ: ಭಾರತ ಅಥ್ಲೆಟಿಕ್ಸ್‌ ಫೆಡರೇಷನ್‌ (ಎಎಫ್‌ಐ), ಏಷ್ಯನ್‌ ಕ್ರೀಡಾಕೂಟದ ಮಾನ್ಯತೆಗಾಗಿ ಕಳುಹಿಸಿದ್ದ 400 ಮೀಟರ್ಸ್‌ ಓಟಗಾರ್ತಿ ನಿರ್ಮಲಾ ಶೆರಾನ್‌ ಅವರ ಅರ್ಜಿಯನ್ನು ಆಯೋಜಕರು ತಿರಸ್ಕರಿಸಿದ್ದಾರೆ.

ಅಗತ್ಯ ಮಾಹಿತಿಗಳನ್ನು ಒದಗಿಸದಿರುವ ಕಾರಣ ಅರ್ಜಿಯನ್ನು ಮಾನ್ಯ ಮಾಡಿಲ್ಲ ಎಂದು ಆಯೋಜಕರು ತಿಳಿಸಿದ್ದಾರೆ.

ನಿರ್ಮಲಾ ಅವರು ಕೆಲ ತಿಂಗಳುಗಳಿಂದ ಯಾವುದೇ ಸ್ಪರ್ಧೆಗಳಲ್ಲಿ ಭಾಗವಹಿಸಿಲ್ಲ. ಫೆಡರೇಷನ್‌ನ ಸಂಪರ್ಕಕ್ಕೂ ಸಿಕ್ಕಿಲ್ಲ. ಹೀಗಿದ್ದರೂ ಅವರ ಹೆಸರನ್ನು ಎಎಫ್‌ಐ, ಏಷ್ಯನ್‌ ಕ್ರೀಡಾಕೂಟದ ಮಾನ್ಯತೆಗಾಗಿ ಕಳುಹಿಸಿದ್ದ ಪ್ರಾಥಮಿಕ ಪಟ್ಟಿಯಲ್ಲಿ ಸೇರಿಸಿತ್ತು.

‘ನಿರ್ಮಲಾ ಅವರು ಎಲ್ಲಿದ್ದಾರೆ ಎಂಬುದು ತಿಳಿದಿಲ್ಲ. ಅವರನ್ನು ಸಂಪರ್ಕಿಸಲು ಸಾಕಷ್ಟು ಪ್ರಯತ್ನಿಸಿದ್ದೇವೆ. ಅವರ ಮನೆಗೆ ಪತ್ರವನ್ನೂ ಬರೆದಿದ್ದೇವೆ. ಆದರೆ ಯಾವುದಕ್ಕೂ ಉತ್ತರ ಬಂದಿಲ್ಲ. ಏಷ್ಯನ್‌ ಕೂಟಕ್ಕೂ ಮುನ್ನ ಹಲವು ಟೂರ್ನಿಗಳು ನಡೆಯಲಿವೆ. ಒಂದು ವೇಳೆ ನಿರ್ಮಲಾ, ಅವುಗಳಲ್ಲಿ ಭಾಗವಹಿಸಿ ಅರ್ಹತೆ ಗಳಿಸಿದರೆ ಕೊನೆಯಲ್ಲಿ ಅವರ ಹೆಸರನ್ನು ಆಯೋಜಕರಿಗೆ ಕಳುಹಿಸುವುದು ಕಷ್ಟವಾಗಬಹುದು. ಈ ಕಾರಣದಿಂದಲೇ ಪ್ರಾಥಮಿಕ ಪಟ್ಟಿಯಲ್ಲಿ ಹೆಸರು ಸೇರಿಸಲಾಗಿದೆ’ ಎಂದು ಎಎಫ್‌ಐ ಕಾರ್ಯದರ್ಶಿ ಸಿ.ಕೆ.ವಲ್ಸನ್‌ ತಿಳಿಸಿದ್ದಾರೆ.

ನಿರ್ಮಲಾ, 2016 ಮತ್ತು 2017ರಲ್ಲಿ ನಡೆದಿದ್ದ ಆಯ್ಕೆ ಟ್ರಯಲ್ಸ್‌ನಲ್ಲಿ ಶ್ರೇಷ್ಠ ಸಾಮರ್ಥ್ಯ ತೋರಿ ರಿಯೊ ಒಲಿಂಪಿಕ್ಸ್‌ ಮತ್ತು ವಿಶ್ವ ಚಾಂಪಿಯನ್‌ಷಿಪ್‌ಗೆ ಅರ್ಹತೆ ಪಡೆದಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry