ಮಜೀದ್‌ ಮಿಂಚು: ಪಂದ್ಯ ಡ್ರಾ

7

ಮಜೀದ್‌ ಮಿಂಚು: ಪಂದ್ಯ ಡ್ರಾ

Published:
Updated:

ಬೆಂಗಳೂರು: ಮಜೀದ್‌ ಮಕಾನದಾರ್ ಹಾಗೂ ಹರ್ಮೈನ್‌ ಅವರ ಬ್ಯಾಟಿಂಗ್‌ ನೆರವಿನಿಂದ  ಎಂ. ಎ. ಟಿ. ಆಚಾರ್ಯ ಶೀಲ್ಡ್‌ಗಾಗಿ ನಡೆಯುತ್ತಿರುವ ಕೆಎಸ್‌ಸಿಎ ಆಶ್ರಯದ ಗುಂಪು ಒಂದರ ಡಿವಿಷನ್‌ 2ರ ಎನ್‌ಗ್ರೇಡ್ಸ್‌ ಕ್ರಿಕೆಟ್‌ ಕ್ಲಬ್‌ ಹಾಗೂ ದಿ ಬೆಂಗಳೂರು ಕ್ರಿಕೆಟರ್ಸ್‌ ನಡುವಣ ಪಂದ್ಯವು ಡ್ರಾನಲ್ಲಿ ಅಂತ್ಯವಾಗಿದೆ.

ಮೊದಲು ಬ್ಯಾಟಿಂಗ್‌ ಮಾಡಿದ ಎನ್‌ಗ್ರೇಡ್ಸ್‌ ಕ್ರಿಕೆಟ್‌ ಕ್ಲಬ್‌ 58.3 ಓವರ್‌ಗಳಲ್ಲಿ 209 ರನ್‌ ಗಳಿಸಿ ಆಲೌ ಟಾಯಿತು. ಮಜೀದ್‌ ಮಕಾನದಾರ್ (77) ಆರ್‌, ಸಂಪ್ರೀತ್‌ ಶೆಟ್ಟಿ (54) ಹಾಗೂ ಎಸ್‌. ಅಂಕಿತ್‌ (54) ಅರ್ಧಶತಕ ಗಳಿಸಿ ತಂಡ ಇನ್ನೂರರ ಗಡಿ ದಾಟಲು ನೆರವಾದರು. ಬೆಂಗಳೂರು ಕ್ರಿಕೆಟರ್ಸ್‌ನ ಕೆ. ಅರುಣ ನಾಲ್ಕು ಹಾಗೂ ಆರ್‌. ಸಚಿನ್‌ ಗಣಕಾಲ್‌ ಅವರು ಎರಡು ವಿಕೆಟ್‌ ಕಬಳಿಸಿದರು.

ಬೆಂಗಳೂರು ಕ್ರಿಕೆಟರ್ಸ್‌ ತಂಡವು ಮೊದಲ ಇನಿಂಗ್ಸ್‌ನಲ್ಲಿ 36.1 ಓವರ್‌ಗಳಲ್ಲಿ 116 ರನ್‌ ಗಳಿಸಿ ಆಲೌಟಾಯಿತು.

ಸಂಕ್ಷಿಪ್ತ ಸ್ಕೋರ್‌: ಎನ್‌ಗ್ರೇಡ್ಸ್‌ ಕ್ರಿಕೆಟ್‌ ಕ್ಲಬ್‌: ಮೊದಲ ಇನಿಂಗ್ಸ್‌: 58.3 ಓವರ್‌ಗಳಲ್ಲಿ 209 (ಆರ್‌. ಸಂಪ್ರೀತ್‌ ಶೆಟ್ಟಿ 54, ಎಸ್‌. ಅಂಕಿತ್‌ 54, ಕೆ. ಮಜೀದ್‌ ಮಕಾನದಾರ್‌ 77, ಕೆ. ಅರುಣ 57ಕ್ಕೆ 4, ಸಚಿನ್‌ ಗಣಕಾಲ್‌ 34ಕ್ಕೆ 2). ಎರಡನೇ ಇನಿಂಗ್ಸ್‌: 45 ಓವರ್‌ಗಳಲ್ಲಿ 8 ವಿಕೆಟ್‌ ನಷ್ಟಕ್ಕೆ 143 (ಮಜೀದ್‌ ಮಕಾನದಾರ್‌ 30, ಹರ್ಮೈನ್‌ 43, ಸಚಿನ್‌ ಗಣಕಾಲ್‌ 60ಕ್ಕೆ 3, ಕುಶಾಲ್‌ ಪ್ರಮೇಶ್‌ 17ಕ್ಕೆ 2).

ದಿ ಬೆಂಗಳೂರು ಕ್ರಿಕೆಟರ್ಸ್‌: ಮೊದಲ ಇನಿಂಗ್ಸ್‌: 36.1 ಓವರ್‌ಗಳಲ್ಲಿ 116 (ಕೆ. ಅರುಣ 23, ಆರ್‌. ಅಕ್ಷಯ್‌ 22, ಕೆ. ಎಂ. ಶರತ್‌ 39ಕ್ಕೆ 2, ಯತೀಶ್‌ 38ಕ್ಕೆ 6). ಫಲಿತಾಂಶ: ಪಂದ್ಯ ಡ್ರಾ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry