ಕಠುವಾ ಅತ್ಯಾಚಾರ ಪ್ರಕರಣ: 8 ಆರೋಪಿಗಳ ವಿಚಾರಣೆ

7

ಕಠುವಾ ಅತ್ಯಾಚಾರ ಪ್ರಕರಣ: 8 ಆರೋಪಿಗಳ ವಿಚಾರಣೆ

Published:
Updated:
ಕಠುವಾ ಅತ್ಯಾಚಾರ ಪ್ರಕರಣ: 8 ಆರೋಪಿಗಳ ವಿಚಾರಣೆ

ನವದೆಹಲಿ: ಕಠುವಾದ 8 ವರ್ಷ ಬಾಲಕಿ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣದ 8 ಆರೋಪಿಗಳ ಪೈಕಿ ಏಳು ಮಂದಿಯನ್ನು ಪಠಾಣ್‌ಕೋಟ್‌ ಕೋರ್ಟ್‌ನಲ್ಲಿ ಹಾಜರು ಪಡಿಸಲಾಗಿದೆ. ಇನ್ನು 8ನೇ ಆರೋಪಿಯ ವಿಚಾರಣೆ ಕಠುವಾದ ಬಾಲಾ ನ್ಯಾಯಮಂಡಳಿಯಲ್ಲಿ ನಡೆಯಲಿದೆ. 

ವಿಚಾರಣೆ ಸಂಬಂಧ ರಾಷ್ಟ್ರ ರಾಜಧಾನಿ ಹಾಗೂ ಪಠಾಣ್‌ಕೋಟ್‌ ನ್ಯಾಯಾಲಯದ ಸುತ್ತಮುತ್ತ ಬಿಗಿ ಭದ್ರತೆ ಕಲ್ಪಿಸಲಾಗಿದೆ.

ಜಮ್ಮು ಮತ್ತು ಕಾಶ್ಮೀರ ಸರ್ಕಾರ ಸ್ಥಳೀಯ ನ್ಯಾಯಾಲಯದಲ್ಲೇ ವಿಚಾರಣೆ ನಡೆಸಲು ಒಪ್ಪಿದ್ದ ಸುಪ್ರೀಂ, ವಿಚಾರಣೆಯನ್ನು ಬೇರೆ ರಾಜ್ಯಕ್ಕೆ ವರ್ಗಾವಣೆ ಮಾಡಲು ವಿರೋಧ ವ್ಯಕ್ತಪಡಿಸಿತ್ತು ಹಾಗೂ ಪಠಾಣ್‌ಕೋಟ್‌ ಕೋರ್ಟ್‌ನಲ್ಲಿಯೇ ನ್ಯಾಯೋಚಿತವಾಗಿ ವಿಚಾರಣೆ ನಡೆಸುವಂತೆ ಸೂಚಿಸಿತ್ತು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳೀಯ ನ್ಯಾಯಾಲಯ ಮೇ 7ರ ವರೆಗೆ ವಿಚಾರಣೆಗೆ ತಡೆ ನೀಡಿತ್ತು. ಈ ಪ್ರಕರಣದ ವಿಚಾರಣೆಯನ್ನು ಮುಂದೂಡದೇ ಪ್ರತಿ ದಿನ ನಡೆಸುವುದು ಹಾಗೂ ವಿಚಾರಣೆಯನ್ನು ಕ್ಯಾಮೆರಾ ಎದುರು ನಡೆಸಬೇಕು ಎಂದು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್‌ ಮತ್ತು ಇಂದೂ ಮಲ್ಹೋತ್ರ ಅವರಿದ್ದ ನ್ಯಾಯಾಪೀಠ ಸೂಚಿಸಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry