ಮಂಗಳವಾರ, ಮೇ 18, 2021
30 °C

ಶನಿವಾರ, 1–6–1968

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪಂಪ್‌ಸೆಟ್‌ಗಳಿಗೆ ವಿದ್ಯುತ್: ವ್ಯಕ್ತಿಗಳಿಗೆ ಠೇವಣಿ ವಿನಾಯಿತಿ

ಬೆಂಗಳೂರು, ಮೇ 31– ಪಂಪ್‌ ಸೆಟ್‌ಗಳಿಗೆ ವಿದ್ಯುಚ್ಛಕ್ತಿ ನೀಡಲು ಆಗುವ ವೆಚ್ಚದ ಶೇಕಡ ಐವತ್ತರಷ್ಟನ್ನು ವಿದ್ಯುಚ್ಛಕ್ತಿ ಮಂಡಲಿಯಲ್ಲಿ ‘ಠೇವಣಿ’ ಇಡಬೇಕೆಂಬ ಶರತ್ತನ್ನು ವ್ಯಕ್ತಿಗಳಿಗೆ ಸಂಬಂಧಿಸಿದಂತೆ ಕೈಬಿಡಲು ಸರಕಾರ ಇಂದು ನಿರ್ಧರಿಸಿತು.

ಆಡಳಿತದಲ್ಲಿ ದಕ್ಷತೆ ಹೆಚ್ಚಿಸಲು ಉನ್ನತಾಧಿಕಾರಿಗಳ ಸಭೆ ಸದ್ಯದಲ್ಲೆ

ಬೆಂಗಳೂರು, ಮೇ 31– ರಾಜ್ಯದಲ್ಲಿ ಆಡಳಿತವನ್ನು ಹೆಚ್ಚು ದಕ್ಷತೆಯಿಂದ ಕೂಡಿದುದೂ ಪರಿಣಾಮಕಾರಿಯಾದುದೂ ಆಗುವಂತೆ ಮಾಡುವ ಬಗ್ಗೆ ವಿಚಾರ ವಿನಿಮಯ ಮಾಡಿಕೊಳ್ಳಲು ಸದ್ಯದಲ್ಲೇ ಉನ್ನತ ಅಧಿಕಾರಿಗಳ ಸಭೆಯೊಂದನ್ನು ತಾವು ಕರೆಯಲಿರುವುದಾಗಿ ಮುಖ್ಯಮಂತ್ರಿ ಶ್ರೀ ವೀರೇಂದ್ರ ಪಾಟೀಲರು ಇಂದು ವರದಿಗಾರರಿಗೆ ತಿಳಿಸಿದರು.

ಸಚಿವರ ಆಸ್ತಿ ವಿವರ ಕೇಳುವುದಾಗಿ ಮುಖ್ಯಮಂತ್ರಿ ಶ್ರೀ ಪಾಟೀಲ್

ಬೆಂಗಳೂರು, ಮೇ 31– ತಮ್ಮ ಆಸ್ತಿ ಮತ್ತು ಸಾಲದ ವಿವರಗಳನ್ನು ನೀಡುವಂತೆ ಹೊಸ ಮಂತ್ರಿಗಳೂ, ಸ್ಟೇಟ್‌ ಮಂತ್ರಿಗಳೂ, ಉಪಮಂತ್ರಿಗಳನ್ನೂ ಕೇಳಲಿರುವುದಾಗಿ ಮುಖ್ಯಮಂತ್ರಿ ಶ್ರೀ ವೀರೇಂದ್ರ ಪಾಟೀಲರು ಇಂದು ವರದಿಗಾರರಿಗೆ ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.