4

ರಸ್ತೆಗಳ ಖಾಸಗೀಕರಣ ವಿರೋಧಿಸಿ ಪ್ರತಿಭಟನೆ

Published:
Updated:
ರಸ್ತೆಗಳ ಖಾಸಗೀಕರಣ ವಿರೋಧಿಸಿ ಪ್ರತಿಭಟನೆ

ಬೆಂಗಳೂರು: ಟೆಂಡರ್‌ಶ್ಯೂರ್‌ ಹೆಸರಿನಲ್ಲಿ ನಗರದ ರಸ್ತೆಗಳನ್ನು ಖಾಸಗೀಕರಣಗೊಳಿಸಲು ಬಿಬಿಎಂಪಿ ಪ್ರಯತ್ನಿಸುತ್ತಿದೆ ಎಂದು ಆರೋಪಿಸಿ ‘ಫೋರಮ್‌ ಫಾರ್ ಅರ್ಬನ್‌ ಗವರ್ನೆನ್ಸ್‌ ಮತ್ತು ಕಾಮನ್ಸ್ ಸಂಸ್ಥೆ’ ಶುಕ್ರವಾರ ಪ್ರತಿಭಟನೆ ನಡೆಸಿತು.

ಚರ್ಚ್‌ ಸ್ಟ್ರೀಟ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ ಸಂಸ್ಥೆಯ ಸಂಚಾಲಕ ಕ್ಷಿತಿಜ್‌ ಅರಸ್‌ ಮಾತನಾಡಿದರು.

‘ಅಂತರ ರಾಷ್ಟ್ರೀಯ ಮಟ್ಟದ ರಸ್ತೆಗಳನ್ನು ನಿರ್ಮಿಸುವ ಉದ್ದೇಶದಿಂದ ಮರಗಳನ್ನು ಕಡಿಯಲಾಗಿದೆ. ಅಲ್ಲದೆ, ಖಾಸಗಿ ಕಂಪನಿಗಳಿಗೆ ಟೆಂಡರ್‌ ನೀಡಲಾಗಿದೆ. ರಸ್ತೆಬದಿ ವ್ಯಾಪಾರಿಗಳನ್ನು ಖಾಲಿ ಮಾಡಿಸುವ ಉದ್ದೇಶ ಹೊಂದಿದೆ. ಈ ರಸ್ತೆಗೆ ಖಾಸಗಿ ಸಂಸ್ಥೆಯ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಿದೆ ಎಂದರು.

ಹಾಸ್ಯಾಸ್ಪದ ಸಂಗತಿ ಎಂದರೆ, ಜನರಿಗೆ ಕುಡಿಯುವುದಕ್ಕೆ ನೀರಿಲ್ಲದಿದ್ದರೂ ರಸ್ತೆಯನ್ನು ವಾರಕ್ಕೊಮ್ಮೆ ತೊಳೆಯುವ ಯೋಜನೆ ಇದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಬಿಬಿಎಂಪಿ ಮೇಯರ್‌ ಸಂಪತ್ ರಾಜ್‌, ‘ರಸ್ತೆಗಳನ್ನು ಖಾಸಗೀಕರಣ ಮಾಡಿಲ್ಲ, ಹೊರಗುತ್ತಿಗೆ ನೀಡಲಾಗಿದೆ’ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry