ಮೂರು ಬ್ಯಾಂಕ್‌ಗಳಿಂದ ಸಾಲದ ಬಡ್ಡಿದರ ಏರಿಕೆ

7

ಮೂರು ಬ್ಯಾಂಕ್‌ಗಳಿಂದ ಸಾಲದ ಬಡ್ಡಿದರ ಏರಿಕೆ

Published:
Updated:

ನವದೆಹಲಿ: ಭಾರತೀಯ ಸ್ಟೇಟ್‌ ಬ್ಯಾಂಕ್‌ (ಎಸ್‌ಬಿಐ), ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ (ಪಿಎನ್‌ಬಿ) ಮತ್ತು ಐಸಿಐಸಿಐ ಬ್ಯಾಂಕ್‌ಗಳು ಠೇವಣಿಗಳ ಮೇಲಿನ ಹೆಚ್ಚುವರಿ ವೆಚ್ಚ ಆಧರಿಸಿದ ಬಡ್ಡಿ ದರವನ್ನು (ಎಂಸಿಎಲ್‌ಆರ್‌)  ಶೇ 0.1 ರವರೆಗೆ ಏರಿಕೆ ಮಾಡಿವೆ.

ಪರಿಷ್ಕೃತ ಬಡ್ಡಿದರಗಳು ಸೋಮವಾರದಿಂದ ಜಾರಿಗೆ ಬರಲಿವೆ.

ಸರ್ಕಾರಿ ಸ್ವಾಮ್ಯದ ಅತಿ ದೊಡ್ಡ ಸಾಲದಾತ ಎಸ್‌ಬಿಐ, ಶೇ 0.1 ರಷ್ಟು ಎಂಸಿಎಲ್‌ಆರ್‌ ಏರಿಕೆ ಮಾಡಿದೆ. ಇದರಿಂದ ಗ್ರಾಹರಿಗೆ ನೀಡಿಕೆ ಬಡ್ಡಿದರವು ಶೇ 7.8 ರಿಂದ ಶೇ 7.9ಕ್ಕೆ ಏರಿಕೆಯಾಗಿದೆ.

ಮೂರು ವರ್ಷಗಳ ಅವಧಿ ಠೇವಣಿ ಬಡ್ಡಿದರ ಶೇ 8.35 ರಿಂದ ಶೇ 8.45ಕ್ಕೆ ತಲುಪಿದೆ.

ಪಿಎನ್‌ಬಿ ಬಡ್ಡಿದರವು ಮೂರು ವರ್ಷಗಳ ಅವಧಿಗೆ ಶೇ 8.55ಕ್ಕೆ ಹಾಗೂ ಐದು ವರ್ಷಗಳ ಅವಧಿಗೆ ಶೇ 8.7ಕ್ಕೆ ಏರಿಕೆಕಂಡಿದೆ.

ಖಾಸಗಿ ವಲಯದಲ್ಲಿ ಅತಿದೊಡ್ಡ ಬ್ಯಾಂಕ್‌ ಆಗಿರುವ ಐಸಿಐಸಿಐ ಬ್ಯಾಂಕ್‌ ತನ್ನ ಐದು ವರ್ಷಗಳ ಅವಧಿ ಠೇವಣಿಯ ಬಡ್ಡಿದರವನ್ನು ಶೇ 8.60 ರಿಂದ ಶೇ 8.70ಕ್ಕೆ ಹೆಚ್ಚಿಸಿದೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry