ಖರ್ಚು–ವೆಚ್ಚ ತಡೆಗೆ ಕುಮಾರಸ್ವಾಮಿ ಕ್ರಮ: ಹೊಸ ಕಾರು ಖರೀದಿ, ಕಟ್ಟಡ ನವೀಕರಣಕ್ಕೆ ಬ್ರೇಕ್‌

7
ವಿಶೇಷ ವಿಮಾನದಲ್ಲಿ ಪ್ರಯಾಣ ಇಲ್ಲ

ಖರ್ಚು–ವೆಚ್ಚ ತಡೆಗೆ ಕುಮಾರಸ್ವಾಮಿ ಕ್ರಮ: ಹೊಸ ಕಾರು ಖರೀದಿ, ಕಟ್ಟಡ ನವೀಕರಣಕ್ಕೆ ಬ್ರೇಕ್‌

Published:
Updated:
ಖರ್ಚು–ವೆಚ್ಚ ತಡೆಗೆ ಕುಮಾರಸ್ವಾಮಿ ಕ್ರಮ: ಹೊಸ ಕಾರು ಖರೀದಿ, ಕಟ್ಟಡ ನವೀಕರಣಕ್ಕೆ ಬ್ರೇಕ್‌

ಬೆಂಗಳೂರು: ಆಡಳಿತದಲ್ಲಿ ಆಗುತ್ತಿರುವ ಅನಗತ್ಯ ಖರ್ಚು, ಹೊಸ ಕಾರುಗಳ ಖರೀದಿಗೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಬ್ರೇಕ್‌ ಹಾಕಿದ್ದಾರೆ.

ರಾಜ್ಯದ ಬೊಕ್ಕಸಕ್ಕೆ ಆಗುತ್ತಿರುವ ಆರ್ಥಿಕ ನಷ್ಟ ತಡೆಯುವುದು ಹಾಗೂ ಆರ್ಥಿಕ ಮಟ್ಟ ಉನ್ನತಗೊಳಿಸಲು ಅವರು ಹಲವು ಕ್ರಮಗಳನ್ನು ಕೈಗೊಂಡಿದ್ದು, ಈ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಹೊಸ ಕಾರು ಖರೀದಿಗಾಗಿ ಸರ್ಕಾರಿ ಇಲಾಖೆ, ಕಚೇರಿ ಹಾಗೂ ಸಂಸ್ಥೆಗಳು ಸಲ್ಲಿಸಿರುವ ಪ್ರಸ್ತಾವನೆಯನ್ನು ಪರಿಶೀಲಿಸಿ ನಿರ್ಧಾರ ಕೈಗೊಳ್ಳಲು ಅಧಿಕಾರಿಗಳಿಗೆ ಆದೇಶಿಸಿದ್ದಾರೆ. ಆಡಳಿತದಲ್ಲಿ ಆಗುತ್ತಿರುವ ಅನಗತ್ಯ ಖರ್ಚು–ವೆಚ್ಚಕ್ಕೆ ಕಡಿವಾಣ ಹಾಕುವಂತೆ ಮುಖ್ಯಮಂತ್ರಿ ಸೂಚಿಸಿದ್ದಾರೆ.

ಸರ್ಕಾರಿ ಕಚೇರಿಗಳು ಹಾಗೂ ಸರ್ಕಾರದ ಅಧಿಕೃತ ನಿವಾಸಗಳಿಗೆ ಅನಗತ್ಯವಾಗಿ ನವೀಕರಣ ಕಾರ್ಯಗಳನ್ನು ನಡೆಸದಂತೆ ತಿಳಿಸಿದ್ದಾರೆ. ವಿಶೇಷ ವಿಮಾನಗಳಲ್ಲಿನ ಪ್ರಯಾಣವನ್ನೂ ಕಡಿತಗೊಳಿಸುತ್ತಿರುವುದಾಗಿ ತಿಳಿದು ಬಂದಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry