ಕರುಣಾನಿಧಿಗೆ 95ರ ಸಂಭ್ರಮ: ಗಣ್ಯರಿಂದ ಶುಭ ಹಾರೈಕೆ

7

ಕರುಣಾನಿಧಿಗೆ 95ರ ಸಂಭ್ರಮ: ಗಣ್ಯರಿಂದ ಶುಭ ಹಾರೈಕೆ

Published:
Updated:
ಕರುಣಾನಿಧಿಗೆ 95ರ ಸಂಭ್ರಮ: ಗಣ್ಯರಿಂದ ಶುಭ ಹಾರೈಕೆ

ಚೆನ್ನೈ: ಡಿಎಂಕೆ ಪಕ್ಷದ ಮುಖ್ಯಸ್ಥ ಎಂ. ಕರುಣಾನಿಧಿ ಅವರು ಜೂನ್‌ 3ಕ್ಕೆ (ಭಾನುವಾರ) 95ನೇ ವಯಸ್ಸಿಗೆ ಕಾಲಿಟ್ಟಿದ್ದಾರೆ.

ಕುರುಣಾನಿಧಿ ಅವರ ಹುಟ್ಟುಹಬ್ಬ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ, ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಸೇರಿದಂತೆ ಹಲವು ಗಣ್ಯರು ಟ್ವಿಟರ್‌ನಲ್ಲಿ ಶುಭಕೋರಿದ್ದಾರೆ.

‘ಕರುಣಾನಿಧಿ ಅವರಿಗೆ ಜನ್ಮ ದಿನದ ಶುಭಾಶಯಗಳು. ಬರಹಗಾರ, ಕವಿ, ಭಾಷಣಕಾರ ಹಾಗೂ ಭಾರತದ ಹಿರಿಯ ರಾಜಕೀಯ ಮುಖಂಡರಲ್ಲಿ ಒಬ್ಬರಾಗಿದ್ದಾರೆ. ಅವರು ಸುದೀರ್ಘ ಹಾಗೂ ಆರೋಗ್ಯಕರ ಜೀವನ ನಡೆಸಲೆಂದು ಆಶಿಸುತ್ತೇನೆ’ ಎಂದು ಪ್ರಧಾನಿ ಮೋದಿ ಟ್ವೀಟ್‌ ಮಾಡಿದ್ದಾರೆ.

*

‘ಕರುಣಾನಿಧಿ ಅವರಿಗೆ ಹುಟ್ಟುಹಬ್ಬಕ್ಕೆ ಶುಭ ಹಾರೈಸಲು ಇಚ್ಚಿಸುತ್ತೇನೆ. ನಿಮಗೆ ದೀರ್ಘ ಕಾಲ ಉತ್ತಮ ಆರೋಗ್ಯ, ಸಂತೋಷ ಸಿಗಲಿ’ ಎಂದು ರಾಹುಲ್‌ ಗಾಂಧಿ ಟ್ವೀಟ್‌ ಮಾಡಿದ್ದಾರೆ.

*

‘ಕರುಣಾನಿಧಿ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು. ನಿಮಗೆ ಉತ್ತಮ ಆರೋಗ್ಯ ಮತ್ತು ಸಂತೋಷ ಸಿಗಲೆಂದು ನಾನು ಹಾರೈಸುತ್ತೇನೆ’ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಟ್ವೀಟ್‌ ಮಾಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry