ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲೆಗಳ ಸಬಲೀಕರಣ ಶಿಕ್ಷಕರ ಜವಾಬ್ದಾರಿ

ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಶಾಸಕ ಚರಂತಿಮಠ ಸಲಹೆ
Last Updated 4 ಜೂನ್ 2018, 10:32 IST
ಅಕ್ಷರ ಗಾತ್ರ

ಬಾಗಲಕೋಟೆ: ‘ಸರ್ಕಾರಿ ಶಾಲೆಗಳತ್ತ ಮಕ್ಕಳು ಆಕರ್ಷಿತರಾಗಬೇಕಾದರೆ ಶಿಕ್ಷಕರು ಮೊದಲು ಪೂರ್ಣ ಪ್ರಮಾಣದಲ್ಲಿ ತರಬೇತಿಗೊಳ್ಳಬೇಕು’ ಎಂದು ಶಾಸಕ ವೀರಣ್ಣ ಚರಂತಿಮಠ ಹೇಳಿದರು.

ತಾಲ್ಲೂಕಿನ ಕದಾಂಪುರ ಪುನರ್ವಸತಿ ಕೇಂದ್ರದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಜರುಗಿದ ತಾಲ್ಲೂಕು ಮಟ್ಟದ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ನಿರಂತರ ತರಬೇತಿಯಿಂದ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಲು ಸಾಧ್ಯ. ಈ ನಿಟ್ಟಿನಲ್ಲಿ ಶಾಲೆಗಳ ಸಬಲೀಕರಣ ಮಾಡುವ ಜವಾಬ್ದಾರಿ ಶಿಕ್ಷಕರ ಮೇಲಿದೆ’ ಎಂದರು.

‘ಕೇಂದ್ರ ಸರ್ಕಾರ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣಕ್ಕಾಗಿ ಸಮಗ್ರ ಶಿಕ್ಷಣ ಅಭಿಯಾನದಲ್ಲಿ ಸಾಕಷ್ಟು ನೆರವು ನೀಡಿದೆ. ಪ್ರತಿಯೊಬ್ಬರು ಇದರ ಸದುಪಯೋಗ ಪಡೆದುಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕಿ ಎಂ.ಆರ್.ಕಾಮಾಕ್ಷಿ ಮಾತನಾಡಿ, ‘ಜಿಲ್ಲೆಗೆ ಈ ಬಾರಿ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಉತ್ತಮ ಸ್ಥಾನ ಪಡೆಯಲು ಕ್ರಿಯಾಯೋಜನೆ ರೂಪಿಸಲಾಗಿದೆ. ಅದನ್ನು ಸ್ಪಷ್ಟವಾಗಿ ಜಾರಿಗೆ ತರಲು ಈಗಿನಿಂದಲೇ ಶ್ರಮಿಸಲಾಗುತ್ತಿದೆ’ ಎಂದರು.

ಕ್ಷೇತ್ರ ಸಮನ್ವಯಾಧಿಕಾರಿ ಬಿ.ವಿ. ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಾರ್ವಜನಿಕ ನ್ಯಾಯ ಸಮಿತಿ ಅಧ್ಯಕ್ಷೆ ಕವಿತಾ ದಡ್ಡಿ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಚನ್ನನಗೌಡ ಪರನಗೌಡರ, ಜಿಲ್ಲಾ ಪಂಚಾಯ್ತಿ ಸದಸ್ಯರಾದ ಶೋಭಾ ಬಿರಾದಾರಪಾಟೀಲ, ರಂಗನಗೌಡ ಗೌಡರ, ಹನುಮವ್ವ ಕರಿಹೊಳಿ, ತಾಲ್ಲೂಕು ಪಂಚಾಯ್ತಿ ಉಪಾಧ್ಯಕ್ಷ ಸಲೀಂ ಶೇಖ್, ಸದಸ್ಯರಾದ ರಾಜಶೇಖರ ಅಂಗಡಿ, ಪರಶುರಾಮ ಛಬ್ಬಿ, ಗ್ರಾಮ ಪಂಚಾಯ್ತಿ ಅಧ್ಯಕ್ಷೆ ರೇಣುಕಾ ಶಿವಪ್ಪ ರಾಠೋಡ, ಪರಶುರಾಮ ಅವ್ವಣ್ಣೆಪ್ಪ ಹೊನ್ಯಾಳ, ಆರ್‌ಎಂಎಸ್ಎ ಅಧಿಕಾರಿ ಮುಂಡೇವಾಡಿ, ಜಾಸ್ಮಿನ್ ಕಿಲ್ಲೇದಾರ್, ಎಸ್‌ಡಿಎಂಸಿ ಅಧ್ಯಕ್ಷ ಮಂಜುಗೌಡ ಕಾಜಗಾರ, ಬಸವರಾಜ ಭರಮಗೌಡರ, ಸಂಗೀತಾ ರಾಠೋಡ, ಸುವರ್ಣ ಬಾಲನ್ನವರ, ರೇಣುಕಾ ಅಂಬಿಗೇರ, ಸಿ.ಬಿ. ಕಲ್ಹೋಲ, ದಯಾನಂದ ಶಿಕ್ಕೇರಿ, ಎ.ಆರ್. ಹಿರೇಮಠ, ಲಕ್ಷ್ಮಣ ಯಂಕಂಚಿ, ಜಿ.ಬಿ. ಚಲವಾದಿ, ಎಸ್.ಎ. ಸಾರಂಗಮಠ, ಡಿ.ಎಲ್. ರಾಠೋಡ, ಆರ್.ಜಿ. ಮುಲ್ಲಾ, ಸಾವಿತ್ರಿ ಕೊಂಡಗೂಳಿ, ಎಸ್.ಕೆ. ಭುವನೇಶ್ವರಿ, ಎಂ.ಬಿ. ದೊಡಮನಿ. ನಿರ್ಮಲಾ ಪತ್ತಾರ, ಶಿಕ್ಷಣ ಸಂಯೋಜಕ ಡಾ.ಎಸ್.ಬಿ. ಹುಲ್ಯಾಳ, ಡಾ.ಪಿ.ಜಿ. ಖಾಡೆ, ಎಸ್.ಎಸ್, ಹಿರೇಮಠ, ವಿನೋದ ಯಡಹಳ್ಳಿ, ಎಸ್.ಕೆ. ಕೊಳ್ಳಿ, ಸಂಗಮೇಶ ಸಣ್ಣತಂಗಿ, ಕೆ.ಜಿ. ಕವಟಗಿಮಠ ಇದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ದೊಡ್ಡಬಸಪ್ಪ ನೀರಲಕೇರಿ ಸ್ವಾಗತಿಸಿದರು.

ಮೆರವಣಿಗೆ: ಕಾರ್ಯಕ್ರಮಕ್ಕೂ ಮುಂಚೆ ಶಿಕ್ಕೇರಿ, ಶಿರಗುಪ್ಪಿ ಎಲ್.ಟಿ.,ಕದಾಂಪುರ ಆರ್.ಸಿ ಹಾಗೂ ಸಂಗೊಂದಿ ಆರ್.ಸಿ ಗ್ರಾಮಗಳಲ್ಲಿ ವರ್ಣರಂಜಿತ ಅಕ್ಷರ ಬಂಡಿಗಳ ಮೆರವಣಿಗೆಯು ಮಕ್ಕಳ ಡೊಳ್ಳು ಮೇಳದೊಂದಿಗೆ ಅದ್ಧೂರಿಯಾಗಿ ಜರುಗಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT