ಜ್ವಾಲಾಮುಖಿ: 25 ಸಾವು

7

ಜ್ವಾಲಾಮುಖಿ: 25 ಸಾವು

Published:
Updated:
ಜ್ವಾಲಾಮುಖಿ: 25 ಸಾವು

ಗ್ವಾಟೆಮಾಲ ಸಿಟಿ: ಇಲ್ಲಿನ ಫ್ಯೂಗೊ ಜ್ವಾಲಾಮುಖಿ ಸ್ಫೋಟಗೊಂಡು 25 ಮಂದಿ ಮೃತಪಟ್ಟಿದ್ದಾರೆ. ಸುತ್ತಮುತ್ತಲಿನ ಜನವಸತಿ ಪ್ರದೇಶಗಳಲ್ಲಿ ಭಾರಿ ಪ್ರಮಾಣದಲ್ಲಿ ಬೂದಿ ಆವರಿಸಿದೆ. ಇದರಿಂದ ಮರಗಿಡ, ವಾಹನ ಮತ್ತು ರಸ್ತೆಗಳು ಬೂದು ಬಣ್ಣಕ್ಕೆ ತಿರುಗಿವೆ. ಬಂಡೆಗಲ್ಲುಗಳು ಉರುಳಿ ಬಿದ್ದಿವೆ. ನಗರದ ವಿಮಾನ ನಿಲ್ದಾಣದ ಕಾರ್ಯವನ್ನು ಸ್ಥಗಿತಗೊಳಿಸಲಾಗಿದೆ.

ಕಣ್ಮರೆಯಾದವರ ಶೋಧ ಕಾರ್ಯ ಮತ್ತು ತೊಂದರೆಗೆ ಒಳಗಾದವರ ರಕ್ಷಣಾ ಕಾರ್ಯವನ್ನು ಭಾನುವಾರ ಬೆಳಕಿನ ಕೊರತೆಯಿಂದಾಗಿ ಸ್ಥಗಿತ ಗೊಳಿಸಿ, ಸೋಮವಾರ ಪುನರಾರಂಭಿಸಲಾಯಿತು ಎಂದು ವಿಪತ್ತು ನಿರ್ವಹಣಾ ರಾಷ್ಟ್ರೀಯ ಸಮನ್ವಯಕಾರ ವಾಟ್ಸ್‌ಆ್ಯಪ್‌ ಗ್ರೂಪ್‌ನಲ್ಲಿ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry