‘ಜಂತಕಲ್ ಗಣಿ ಹಗರಣದ ಉರುಳು ಸಿ.ಎಂ ಕೊರಳಿಗೆ’

7

‘ಜಂತಕಲ್ ಗಣಿ ಹಗರಣದ ಉರುಳು ಸಿ.ಎಂ ಕೊರಳಿಗೆ’

Published:
Updated:

ಸಾಗರ: ‘ನ್ಯಾಯಾಲಯದ ಎದುರು ಇರುವ ಜಂತಕಲ್ ಗಣಿ ಹಗರಣದ ಉರುಳು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಕೊರಳಿಗೆ ಬೀಳಲಿದೆ. ಈ ಹಗರಣವೊಂದೇ ಮುಖ್ಯಮಂತ್ರಿ ಕುರ್ಚಿಯನ್ನು ಅಲುಗಾಡಿಸಲಿದೆ’ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಬಿ.ಎಸ್. ಯಡಿಯೂರಪ್ಪ ಭವಿಷ್ಯ ನುಡಿದರು.

ಇಲ್ಲಿನ ವಿಧಾನಸಭಾ ಕ್ಷೇತ್ರದ ಮತದಾರರಿಗೆ, ಬಿಜೆಪಿ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸಲು ಸೋಮವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಕುಮಾರಸ್ವಾಮಿ ಅವರು ನಡೆಸಿರುವ ಭ್ರಷ್ಟಾಚಾರದ ಅನೇಕ ಹಗರಣಗಳ ಬಗ್ಗೆ ನನಗೆ ಮಾಹಿತಿ ಇದೆ. ಸೂಕ್ತ ಸಂದರ್ಭದಲ್ಲಿ ಅವುಗಳನ್ನು ಬಹಿರಂಗಪಡಿಸುತ್ತೇನೆ’ ಎಂದು ಮಾಹಿತಿ ನೀಡಿದರು.

‘ಇನ್ನು 20ರಿಂದ 25 ದಿನ ಸರ್ಕಾರದ ವೈಫಲ್ಯಗಳ ಬಗ್ಗೆ ಮಾತನಾಡುವುದಿಲ್ಲ. ಸಂಪುಟ ವಿಸ್ತರಣೆ ನಂತರ ರೈತರ ಸಾಲ ಮನ್ನಾ ಸೇರಿ ಹಲವು ವಿಷಯಗಳ ಕುರಿತು ಸರ್ಕಾರದ ಮೂಗು ಹಿಡಿಯುತ್ತೇನೆ’ ಎಂದು ಅವರು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry