ಗೌರಿ ಲಂಕೇಶ್‌ಗೆ ‘ನ್ಯೂಸಿಯಂ’ ಗೌರವ

7

ಗೌರಿ ಲಂಕೇಶ್‌ಗೆ ‘ನ್ಯೂಸಿಯಂ’ ಗೌರವ

Published:
Updated:
ಗೌರಿ ಲಂಕೇಶ್‌ಗೆ ‘ನ್ಯೂಸಿಯಂ’ ಗೌರವ

ವಾಷಿಂಗ್ಟನ್: ಇಲ್ಲಿನ ಪ್ರತಿಷ್ಠಿತ ‘ನ್ಯೂಸಿಯಂ’ ಸಂಸ್ಥೆ ಭಾರತದ ಗೌರಿ ಲಂಕೇಶ್ ಹಾಗೂ ಸುದೀಪ್ ದತ್ತ ಭೌಮಿಕ್ ಸೇರಿ 18 ಪತ್ರಕರ್ತರಿಗೆ ಮರಣೋತ್ತರವಾಗಿ ಗೌರವ ಸಲ್ಲಿಸಿದೆ.

ಮಾಧ್ಯಮ ಸ್ವಾತಂತ್ರ್ಯದ ಪ್ರಾಮುಖ್ಯ ಸಾರುವ ಸಲುವಾಗಿ ಕಾರ್ಯನಿರ್ವಹಿಸುವ ಸಂಗ್ರಹಾಲಯ ‘ನ್ಯೂಸಿಯಂ’ ಇವರನ್ನು ‍‍ಪತ್ರಕರ್ತರ ಸ್ಮಾರಕಕ್ಕೆ ಸೇರ್ಪಡೆಗೊಳಿಸಿದೆ.

ವಿಶ್ವದೆಲ್ಲೆಡೆ ಅಪಾಯ ಎದುರಿಸಿ ಸಾವಿಗೀಡಾದ ಪತ್ರಕರ್ತರ ಹೆಸರನ್ನು ‘ನ್ಯೂಸಿಯಂ’ ಪ್ರತಿವರ್ಷ ತನ್ನ ಸ್ಮಾರಕ ಪಟ್ಟಿಗೆ ಸೇರಿಸುತ್ತದೆ. ‌

‘ಇವರು ಮಾಧ್ಯಮ ಸ್ವಾತಂತ್ರ್ಯಕ್ಕೆ ಅಪಾಯವಿರುವ ರಾಷ್ಟ್ರಗಳಲ್ಲಿದ್ದರು’ ಎಂದು ಫ್ರೀಡಂ ಫೋರಂ ಇನ್‌ಸ್ಟಿಟ್ಯೂಟ್‌ನ ಕ್ಯಾಥಿ ಟ್ರಾಸ್ಟ್ ಅವರು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry