ರಕ್ಷಣಾ ಅಕಾಡೆಮಿಯ ಐವರ ವಿರುದ್ಧ ಪ್ರಕರಣ

7

ರಕ್ಷಣಾ ಅಕಾಡೆಮಿಯ ಐವರ ವಿರುದ್ಧ ಪ್ರಕರಣ

Published:
Updated:

ನವದೆಹಲಿ: ಸೇನಾ ಸಿಬ್ಬಂದಿಗೆ ತರಬೇತಿ ನೀಡುವ ಪ್ರತಿಷ್ಠಿತ ರಕ್ಷಣಾ ಅಕಾಡೆಮಿಯಲ್ಲಿ ಶಿಕ್ಷಕರ ನೇಮಕಾತಿಯಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಪ್ರಾಂಶುಪಾಲ ಓಂಪ್ರಕಾಶ್ ಶುಕ್ಲಾ, ನಾಲ್ವರು ಸಿಬ್ಬಂದಿ ಹಾಗೂ ಇತರರ ವಿರುದ್ಧ ಸಿಬಿಐ ಗುರುವಾರ ಪ್ರಕರಣ ದಾಖಲಿಸಿದೆ.

ವಂಚನೆ, ಸಂಚು ಹಾಗೂ ಭ್ರಷ್ಟಾಚಾರ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿರುವ ಸಿಬಿಐ, ಆರೋಪಿಗಳ ಮನೆಗಳು ಹಾಗೂ ಕಚೇರಿಗಳಲ್ಲಿ ಶೋಧ ನಡೆಸಿದೆ.

ಪುಣೆಯ ಖಡಕ್‌ವಾಸ್ಲಾದಲ್ಲಿರುವ ತರಬೇತಿ ಕೇಂದ್ರಕ್ಕೆ 2011ರಲ್ಲಿ ಶುಕ್ಲಾ ನೇಮಕಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry