ಕಠುವಾ: ಏಳು ಆರೋಪಿಗಳ ವಿರುದ್ಧ ದೋಷಾರೋಪ

7

ಕಠುವಾ: ಏಳು ಆರೋಪಿಗಳ ವಿರುದ್ಧ ದೋಷಾರೋಪ

Published:
Updated:
ಕಠುವಾ: ಏಳು ಆರೋಪಿಗಳ ವಿರುದ್ಧ ದೋಷಾರೋಪ

ಪಠಾಣ್‌ಕೋಟ್‌, ಪಂಜಾಬ್‌: ‘ಕಠುವಾ ಪ್ರಕರಣ’ ಎಂದೇ ದೇಶವ್ಯಾಪಿ ಗುರುತಿಸಿಕೊಂಡಿರುವ ಎಂಟು ವರ್ಷದ ಬಾಲಕಿ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಎಂಟು ಮಂದಿ ಆರೋಪಿಗಳ ಪೈಕಿ ಏಳು ಮಂದಿ ವಿರುದ್ಧ ಪಠಾಣ್‌ಕೋಟ್ ನ್ಯಾಯಾಲಯವು ದೋಷಾರೋಪ ಹೊರಿಸಿದೆ. ಮತ್ತೊಬ್ಬ ಆರೋಪಿ ಅಪ್ರಾಪ್ತ ವಯಸ್ಕನಾಗಿದ್ದು, ಈ ‍ಪ್ರಕರಣದ ವಿಚಾರಣೆ ಕಠುವಾದ ಬಾಲಾ ನ್ಯಾಯಮಂಡಳಿಯಲ್ಲಿ ನಡೆಯಲಿದೆ.

ಮೇ 31ರಂದು ಆರೋಪಿಗಳ ವಿಚಾರಣೆ ಇಲ್ಲಿನ ನ್ಯಾಯಾಲಯದಲ್ಲಿ ಆರಂಭಗೊಂಡಿತ್ತು. ಪ್ರಕರಣದ ವಿಚಾರಣೆಯನ್ನು ಚಂಡಿಗಡಕ್ಕೆ ವರ್ಗಾಯಿಸಬೇಕು ಎಂದು ಸಂತ್ರಸ್ತೆಯ ತಂದೆ ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌, ಪ್ರಕರಣವನ್ನು ಪಠಾಣ್‌ಕೋಟ್‌ ಜಿಲ್ಲಾ ನ್ಯಾಯಾಲಯಕ್ಕೆ ವರ್ಗಾಯಿಸಿ ಆದೇಶವನ್ನು ಹೊರಡಿಸಿತ್ತು.

ಜಮ್ಮು ಮತ್ತು ಕಾಶ್ಮೀರದ ಅಪರಾಧ ವಿಭಾಗದ ಪೊಲೀಸರು ಸಲ್ಲಿಸಿರುವ 15 ಪುಟಗಳ ದೋಷಾರೋಪ ಪಟ್ಟಿಯಲ್ಲಿ, ‘ಸಂತ್ರಸ್ತೆ 10 ವರ್ಷದ ಬಾಲಕಿ ಅಲೆಮಾರಿ ಸಮುದಾಯಕ್ಕೆ ಸೇರಿದವಳು. ಕಳೆದ ಜನವರಿ 10ರಂದು ಆಕೆಯನ್ನು 8 ಆರೋಪಿಗಳು ಅಪಹರಿಸಿ, ಅತ್ಯಾಚಾರ ಎಸಗಿ ಕೊಲೆ ಮಾಡಿದ್ದರು’ ಎಂದು ತಿಳಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry