ವಿಶ್ವಕಪ್‌ ಆತಿಥ್ಯಕ್ಕೆ ರಷ್ಯಾ ಸಜ್ಜು

7

ವಿಶ್ವಕಪ್‌ ಆತಿಥ್ಯಕ್ಕೆ ರಷ್ಯಾ ಸಜ್ಜು

Published:
Updated:
ವಿಶ್ವಕಪ್‌ ಆತಿಥ್ಯಕ್ಕೆ ರಷ್ಯಾ ಸಜ್ಜು

ಮಾಸ್ಕೊ: ವಿಶ್ವಕಪ್‌ಗೆ ಆತಿಥ್ಯ ವಹಿಸುತ್ತಿರುವ ರಷ್ಯಾ ಅತಿಥಿಗಳನ್ನು ಸ್ವಾಗತಿಸಲು ಸಂಪೂರ್ಣ ಸಜ್ಜಾಗಿದೆ ಎಂದು ಫಿಫಾ ಅಧ್ಯಕ್ಷ ಜಿಯಾನಿ ಇನ್ಫೆಂಟಿನೊ ಹೇಳಿದ್ದಾರೆ.

ಜನಾಂಗವಾದ, ಮಾನವ ಹಕ್ಕು ಉಲ್ಲಂಘನೆ ಭದ್ರತೆಗೆ ಸಂಬಂಧಿಸಿದ ಯಾವುದೇ ಆತಂಕ ಬೇಡ ಎಂದು ಅವರು ಭರವಸೆ ನೀಡಿದ್ದಾರೆ.

ಮಾಸ್ಕೊ, ಸೇಂಟ್ ಪೀಟರ್ಸ್‌ಬರ್ಗ್‌ ಮತ್ತು ಸೋಚಿ ನಗರಗಳು ಒಟ್ಟು 12 ಕ್ರೀಡಾಂಗಣಗಳಲ್ಲಿ ಜೂನ್‌ 14ರಿಂದ ಜುಲೈ 15ರ ವರೆಗೆ ವಿಶ್ವಕಪ್‌ ಪಂದ್ಯಗಳು ನಡೆಯಲಿವೆ.

‘ವಿಶ್ವಕಪ್‌ಗೆ ರಷ್ಯಾ ಪೂರ್ಣ ಪ್ರಮಾಣದಲ್ಲಿ ಸಿದ್ಧವಾಗಿದೆ ಎಂಬುದರಲ್ಲಿ ಸಂದೇಹ ಬೇಡ. 14ರಂದು ಕೂಟಕ್ಕೆ ಚಾಲನೆ ಸಿಗಲಿದ್ದು ಇಲ್ಲಿ ಎಷ್ಟು ಚೆನ್ನಾಗಿ ಸಿದ್ಧತೆಗಳು ನಡೆದಿವೆ ಎಂಬುದು ಅಂದು ಸಾಬೀತಾಗಲಿದೆ. ಇಲ್ಲಿನ ಕ್ರೀಡಾಂಗಣಗಳು ಫುಟ್‌ಬಾಲ್ ಅಭಿಮಾನಿಗಳನ್ನು ಪುಳಕಗೊಳಿಸಲಿವೆ’ ಎಂದು ಅವರು ವಿಡಿಯೊ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

‘ಇಲ್ಲಿನ ಅಧಿಕಾರಿಗಳು ಭದ್ರತೆಗೆ ಹೆಚ್ಚು ಒತ್ತು ನೀಡಿದ್ದಾರೆ. ಆದ್ದರಿಂದ ಯಾವುದೇ ರೀತಿಯಲ್ಲಿ ಯಾರಿಗೂ ತೊಂದರೆ ಆಗಲಾರದು ಎಂಬ ವಿಶ್ವಾಸ ನನಗಿದೆ. ಇಲ್ಲಿಗೆ ಬರುವ ಪ್ರತಿಯೊಬ್ಬ ಫುಟ್‌ಬಾಲ್ ಅಭಿಮಾನಿಗೂ ಅದ್ಭುತ ಸ್ವಾಗತ ದೊರಕಲಿದೆ’ ಎಂದು ಅವರು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry