ಪ್ರಧಾನಿ ಮೋದಿ ವಿದೇಶ ಪ್ರವಾಸ ಪ್ರಯಾಣದ ವೆಚ್ಚ ₹377 ಕೋಟಿ

7

ಪ್ರಧಾನಿ ಮೋದಿ ವಿದೇಶ ಪ್ರವಾಸ ಪ್ರಯಾಣದ ವೆಚ್ಚ ₹377 ಕೋಟಿ

Published:
Updated:
ಪ್ರಧಾನಿ ಮೋದಿ ವಿದೇಶ ಪ್ರವಾಸ ಪ್ರಯಾಣದ ವೆಚ್ಚ ₹377 ಕೋಟಿ

ಬೆಳಗಾವಿ: ದೇಶದ ಪ್ರಧಾನಿಯಾಗಿ ನರೇಂದ್ರ ಮೋದಿ ಅಧಿಕಾರ ವಹಿಸಿಕೊಂಡ ನಂತರ ಈ ವರ್ಷದ ಜನವರಿಯವರೆಗೆ 52 ರಾಷ್ಟ್ರಗಳಿಗೆ ಭೇಟಿ ನೀಡಿದ್ದಾರೆ. ಅವರ ವಿದೇಶ ಪ್ರವಾಸಕ್ಕಾಗಿ ಅಂದಾಜು ₹ 377.67 ಕೋಟಿ ಖರ್ಚಾಗಿದೆ ಎನ್ನುವ ಅಂಶ ಮಾಹಿತಿ ಹಕ್ಕಿನಡಿ ಬಹಿರಂಗವಾಗಿದೆ.

ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಜಿ. ಗಡಾದ ಅವರು ಪ್ರಧಾನಿ ಕಚೇರಿಯಿಂದ ಈ ಮಾಹಿತಿ ಪಡೆದುಕೊಂಡಿದ್ದಾರೆ.

‘ಅಮೆರಿಕ, ಜಪಾನ್‌, ಸಿಂಗಪುರ, ಜರ್ಮನಿ, ರಷ್ಯಾ, ಚೀನಾ, ಇಂಗ್ಲೆಂಡ್‌ ಸೇರಿದಂತೆ ವಿವಿಧ ರಾಷ್ಟ್ರಗಳಿಗೆ ಭೇಟಿ ನೀಡಿದ್ದಾರೆ. 165 ದಿನಗಳನ್ನು ಅಲ್ಲಿ ಕಳೆದಿದ್ದಾರೆ. ಅಮೆರಿಕಕ್ಕೆ ಅತಿ ಹೆಚ್ಚು ಅಂದರೆ 5 ಬಾರಿ ಭೇಟಿ ನೀಡಿದ್ದಾರೆ‘ ಎಂದು ಗಡಾದ ವಿವರಿಸಿದ್ದಾರೆ.

‘ಪ್ರಧಾನಿ ಅವರ ಪ್ರಯಾಣದ ವೆಚ್ಚವನ್ನು ಮಾತ್ರ ನೀಡಿರುವ ಕಚೇರಿಯು, ಊಟ– ತಿಂಡಿ ಹಾಗೂ ಇತರ ವೆಚ್ಚದ ವಿವರವನ್ನು ನೀಡಿಲ್ಲ. ಭದ್ರತೆಗಾಗಿ ಪ್ರತ್ಯೇಕವಾಗಿ ಹಣ ವ್ಯಯ ಮಾಡಲಾಗುತ್ತದೆ. ಇದರ ವಿವರಣೆಯನ್ನು ಸಹ ನೀಡಿಲ್ಲ. ನೂರಾರು ಕೋಟಿ ರೂಪಾಯಿ ಖರ್ಚು ಮಾಡಿ ವಿದೇಶಗಳಿಗೆ ಪ್ರಧಾನಿ ಪ್ರವಾಸ ಮಾಡಿರುವುದರಿಂದ ದೇಶಕ್ಕೆ ಆಗಿರುವ ಲಾಭವೇನು?’ ಎಂದು ಕೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry