ಸೋಮವಾರ, ಜೂನ್ 21, 2021
27 °C

ಬಿಬಿಎಂಪಿಯಲ್ಲೊಂದು ಮದುವೆ ಮಾತುಕತೆ

ಶರತ್‌ ಹೆಗ್ಡೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಿಬಿಎಂಪಿಯ ಸಾಮಾನ್ಯ ಸಭೆಯಲ್ಲಿ ‘ಸರ್ಕಾರಿ ಸಂಸಾರ’ದ ಚರ್ಚೆ ಸ್ವಾರಸ್ಯಕರವಾಗಿ ನಡೆಯಿತು.

ತಮಗೆ ನೀಡಿದ ಅಭಿನಂದನೆಯನ್ನು ಸ್ವೀಕರಿಸಿ, ಪ್ರತಿಕ್ರಿಯೆ ನೀಡಿದ ಹಿರಿಯೂರು ಶಾಸಕಿ ಪೂರ್ಣಿಮಾ ಶ್ರೀನಿವಾಸ್‌ ಅವರು, ‘ಇಲ್ಲಿ (ಬಿಬಿಎಂಪಿಯಲ್ಲಿ) ಕಾಂಗ್ರೆಸ್‌– ಜೆಡಿಎಸ್ ಲವ್‌ ಮ್ಯಾರೇಜ್‌ ಆಗಿದೆ. ಅಲ್ಲಿ (ವಿಧಾನಸೌಧ) ಅರೇಂಜ್ಡ್‌ ಮ್ಯಾರೇಜ್‌ ಆಗಿದೆ. ಇದು ಎಷ್ಟು ದಿನವೋ ಗೊತ್ತಿಲ್ಲ ಯಾವಾಗ ಡೈವೋರ್ಸ್‌ಗೆ ಹೋಗುತ್ತೋ... ಗೊತ್ತಿಲ್ಲ’ ಎಂದು ಲಘುವಾಗಿ ಕಾಂಗ್ರೆಸಿಗರ ಕಾಲೆಳೆದರು.

ತಕ್ಷಣ ಪ್ರತಿಕ್ರಿಯಿಸಿದ ಮೇಯರ್‌ ಆರ್‌. ಸಂಪತ್‌ರಾಜ್‌, ‘ಲವ್‌ ಮ್ಯಾರೇಜೋ ಅರೇಂಜ್ಡೋ... ಸದ್ಯಕ್ಕಂತೂ ಸಂಸಾರ ಚೆನ್ನಾಗಿ ನಡೆಯುತ್ತಿದೆ ಬಿಡಿ’ ಎಂದರು.

ಆ ವೇಳೆಗಾಗಲೇ ಸುದ್ದಿ ವಾಹಿನಿಗಳಲ್ಲಿ ‘ಖಾತೆ ಬಯಸಿ ದೆಹಲಿಗೆ ಪಯಣ, ಜೆಡಿಎಸ್‌ ಬಣದ ಮುನಿಸು, ಸಮಾಧಾನಕ್ಕೆ ಯತ್ನ... ಇತ್ಯಾದಿ ಸುದ್ದಿಗಳು ಬ್ರೇಕಿಂಗ್‌ ನ್ಯೂಸ್‌ ಆಗಿ ‘ಸ್ಫೋಟ’ಗೊಳ್ಳುತ್ತಿದ್ದವು. ಚೆನ್ನಾಗಿ ಉಂಡು ಮಲಗುವವರೆಗೆ ಗಂಡ ಹೆಂಡಿರ ಜಗಳ ಇದ್ದಿದ್ದೇ ಎಂದು ಸುದ್ದಿಗಾರರು ತಮ್ಮ ಮಾತೂ ಸೇರಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.