ಸೋಮವಾರ, ಡಿಸೆಂಬರ್ 9, 2019
25 °C

ಕ್ಯಾನ್ಸರ್: ವ್ಯಕ್ತಿ ಆತ್ಮಹತ್ಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು:‌ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಗೋವಿಂದರಾಜು (60) ಎಂಬುವರು ಶುಕ್ರವಾರ ರಾತ್ರಿ ಕೆಂಬತ್ತಹಳ್ಳಿ ಮುಖ್ಯರಸ್ತೆಯ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಆರ್‌ಬಿಐ ಲೇಔಟ್ ನಿವಾಸಿಯಾದ ಅವರು, ವಾಯುವಿಹಾರಕ್ಕೆ ಹೋಗುವುದಾಗಿ ಹೇಳಿ ರಾತ್ರಿ 9 ಗಂಟೆ ಸುಮಾರಿಗೆ ಮನೆಯಿಂದ ಹೊರಬಂದಿದ್ದರು. ನಂತರ ಕೆಂಬತ್ತಹಳ್ಳಿಗೆ ತೆರಳಿ ಮರಕ್ಕೆ ನೇಣು ಹಾಕಿಕೊಂಡಿದ್ದಾರೆ.

ಶನಿವಾರ ಬೆಳಗಿನಜಾವ ದಾರಿಹೋಕರು ಶವವನ್ನು ನೋಡಿ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.

‘ತಂದೆಯನ್ನು ಚೆನ್ನಾಗಿಯೇ ನೋಡಿಕೊಳ್ಳುತ್ತಿದ್ದೆವು. ಪ್ರತಿಷ್ಠಿತಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನೂ ಕೊಡಿಸುತ್ತಿದ್ದೆವು. ‘ನನ್ನ ಕಾಯಿಲೆಯಿಂದ ನಿಮಗೆ ಹೊರೆಯಾಗುತ್ತಿದೆ. ನಾನೇ ಏನಾದರೂ ಮಾಡಿಕೊಳ್ಳುತ್ತೇನೆ’ ಎಂದು ಪದೇ ಪದೇ ಹೇಳುತ್ತಿದ್ದರು. ರಾತ್ರಿ ಎಲ್ಲರೂ ಒಟ್ಟಿಗೇ ಕುಳಿತು ಊಟ ಮಾಡಿದ್ದೆವು. ಆ ನಂತರ ಹೊರಗೆ ಹೋಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ’ ಎಂದು  ಮೃತರ ಮಕ್ಕಳು ಹೇಳಿಕೆ ಕೊಟ್ಟಿರುವುದಾಗಿ ಕೋಣನಕುಂಟೆ ಪೊಲೀಸರು ತಿಳಿಸಿದರು.

ಪ್ರತಿಕ್ರಿಯಿಸಿ (+)