ರಸ್ತೆಬದಿಯಲ್ಲಿ ವಾರದಿಂದ ಅಸ್ವಸ್ಥ ಸ್ಥಿತಿಯಲ್ಲಿ ಮಹಿಳೆ:

7
ರಕ್ಷಣೆಗೆ ಮುಂದಾಗದ ತಾಲ್ಲೂಕು ಆಡಳಿತ

 ರಸ್ತೆಬದಿಯಲ್ಲಿ ವಾರದಿಂದ ಅಸ್ವಸ್ಥ ಸ್ಥಿತಿಯಲ್ಲಿ ಮಹಿಳೆ:

Published:
Updated:

ಜಗಳೂರು: ಪಟ್ಟಣದ ದಾವಣಗೆರೆ ರಸ್ತೆಯಲ್ಲಿ  ಆರು ದಿನಗಳಿಂದ ಮಹಿಳೆಯೊಬ್ಬರು ಅಸ್ವಸ್ಥ ಸ್ಥಿತಿಯಲ್ಲಿದ್ದಾರೆ. ಮಳೆ ಗಾಳಿಯಿಂದ ರಕ್ಷಣೆ ಇಲ್ಲದೆ ಅನಾಥರಾಗಿದ್ದು, ತಾಲ್ಲೂಕು ಆಡಳಿತ  ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದಾವಣಗೆರೆ ರಸ್ತೆಯ ಕೃಷಿ ಉತ್ಪನ್ನ ಮಾರುಕಟ್ಟೆ, ತರಳಬಾಳು ಮೈದಾನ ಹಾಗೂ ನ್ಯಾಯಾಲಯದ ಮುಂಭಾಗದ ರಸ್ತೆಬದಿಯಲ್ಲಿ ಮಹಿಳೆ ದಯನೀಯ ಸ್ಥಿತಿಯಲ್ಲಿದ್ದಾರೆ.

ದೈಹಿಕವಾಗಿ ತೀವ್ರ ಬಳಲಿದ್ದು, ಹಗಲು ರಾತ್ರಿ ರಸ್ತೆ ಬದಿಯಲ್ಲೇ ಮಲಗಿದ್ದಾರೆ. ಅಧಿಕಾರಿಗಳು ಹಾಗೂ ಪೊಲೀಸರು ಸೇರಿ ಎಲ್ಲರೂ ಇದೇ ರಸ್ತೆಯಲ್ಲಿ ಸಂಚರಿಸುತ್ತಿದ್ದು,  ರಕ್ಷಣೆಗೆ ಯಾರೂ ಧಾವಿಸಿಲ್ಲ.

ತಹಶೀಲ್ದಾರ್‌ ಶ್ರೀಧರಮೂರ್ತಿ ಅವರನ್ನು ಅಸ್ವಸ್ಥ ಮಹಿಳೆಯ ರಕ್ಷಣೆಗೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಯಿತು. ಆದರೆ, ‘ ಚುನಾವಣೆಯಲ್ಲಿ ಬ್ಯುಸಿಯಾಗಿದ್ದೇನೆ’ ಎಂದು ಉತ್ತರಿಸಿದರು. ಸಬ್‌ ಇನ್ಸ್‌ಪೆಕ್ಟರ್‌ ಮಂಜುನಾಥ್ ಲಿಂಗಾರೆಡ್ಡಿ ಅವರು ಕರೆ ಸ್ವೀಕರಿಸಲಿಲ್ಲ.

ಮಹಿಳಾ ಅಭಿವೃದ್ಧಿ ಇಲಾಖೆ ಅಧಿಕಾರಿ ಗಮನಕ್ಕೆ ತರಲಾಗಿದೆ.‘ ಸಾಂತ್ವನ ರಕ್ಷಣಾ ತಂಡಕ್ಕೆ ಸೂಚಿಸುವುದಾಗಿ ಹೇಳಿದ್ದಾರೆ’ ಎಂದು ತಾಲ್ಲೂಕು ಪಂಚಾಯ್ತಿ ಸದಸ್ಯ ಮರೇನಹಳ್ಳಿ ಬಸವರಾಜ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry