‘ನಾನು ಬಿಗ್‌ಬಾಸ್‌ನಲ್ಲಿ ಇಲ್ಲ’

7

‘ನಾನು ಬಿಗ್‌ಬಾಸ್‌ನಲ್ಲಿ ಇಲ್ಲ’

Published:
Updated:

ಈಚೆಗಷ್ಟೇ ಬಿಡುಗಡೆಯಾದ ‘ಜೂಲಿ–2’ ಚಿತ್ರದಲ್ಲಿ ಸಿನಿಪ್ರಿಯರ ಗಮನ ಸೆಳೆದಿದ್ದ ನಟಿ ಲಕ್ಷ್ಮಿ ರೈ ಅವರು ‘ಬಿಗ್‌ಬಾಸ್‌‘ ಕಾರ್ಯಕ್ರಮದಲ್ಲಿ ಸ್ಪರ್ಧಿಯಾಗಿ ಭಾಗವಹಿಸುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ತಮಿಳು ಮತ್ತು ತೆಲುಗು ಅವತರಣಿಕೆಯ ಬಿಗ್‌ಬಾಸ್‌ ಷೋ, ಅಬ್ಬರ ಶುರುವಾಗಿದ್ದು, ಈ ಬಾರಿ ಯಾವ ನಟರು ಭಾಗವಹಿಸಲಿದ್ದಾರೆ ಎಂಬ ಕುತೂಹಲ ಕಾಡುತ್ತಿದ್ದು, ಈ ಬಾರಿಯ ತಮಿಳಿನ ಬಿಗ್‌ಬಾಸ್‌ ಕಾರ್ಯಕ್ರಮದಲ್ಲಿ ನಟಿ ಲಕ್ಷ್ಮಿ ರೈ ಭಾಗವಹಿಸುತ್ತಾರೆ ಎಂಬ ಊಹಾಪೋಹಗಳಿಗೆ ಲಕ್ಷ್ಮಿ ತೆರೆ ಎಳೆದಿದ್ದಾರೆ.

ಆದರೆ ಕಾರ್ಯಕ್ರಮದ ಪ್ರೊಮೊಗಳಲ್ಲಿ ನಿರೂಪಕ ಕಮಲ್‌ಹಾಸನ್‌ ಅವರ ಚಿತ್ರದ ಪಕ್ಕ ಲಕ್ಷ್ಮಿ ಅವರ ಚಿತ್ರವನ್ನೂ ಕಾರ್ಯಕ್ರಮದ ತಂಡ ಪ್ರಕಟಿಸುತ್ತಿದ್ದು, ಇದಕ್ಕೆ ಲಕ್ಷ್ಮಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ‘ಒಂದೇ ವಿಷಯವನ್ನು ಪದೇಪದೇ ಹೇಳುವುದಕ್ಕೆ ಬೇಸರವಾಗುತ್ತಿದೆ. ನಾನು ಭಾಗವಹಿಸುತ್ತಿಲ್ಲ ಎಂಬುದು ನಿಜ ಆದರೆ, ವಾಹಿನಿಯ ಕೆಲವರು ನನ್ನ ಚಿತ್ರವನ್ನು ಪ್ರೊಮೊಗಳಲ್ಲಿ ಬಳಸಿ ಪ್ರೇಕ್ಷಕರ ದಾರಿ ತಪ್ಪಿಸುತ್ತಿದ್ದಾರೆ’ ಎಂದು ಅವರು ಹೇಳಿದ್ದಾರೆ.

100 ದಿನ ನಡೆಯುವ ತಮಿಳು ಅವತರಣಿಕೆಯ ಈ ಕಾರ್ಯಕ್ರಮ ಜೂನ್ 17ರಿಂದ ಆರಂಭವಾಗಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry