6

ಧೈರ್ಯವಿದ್ದಲ್ಲಿ ಜಾತಿವಿನಾಶ ಮಾಡಲಿ

Published:
Updated:

ಮೈಸೂರು: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧೈರ್ಯವಿದ್ದಲ್ಲಿ ಅಂಬೇಡ್ಕರ್ ಮತ್ತು ರಾಮಸ್ವಾಮಿ ಪೆರಿಯಾರ್ ಅವರ ರೀತಿ ಜಾತಿವಿನಾಶ ಚಳವಳಿ ನಡೆಸಲಿ ಎಂದು ಮೈಸೂರು ವಿಶ್ವವಿದ್ಯಾಲಯ ಪ್ರಾಧ್ಯಾಪಕ ಬಿ.ಪಿ.ಮಹೇಶ್‌ಚಂದ್ರ ಗುರು ಸವಾಲು ಹಾಕಿದರು.

ಇಲ್ಲಿನ ಚಾಮುಂಡಿ ಬೆಟ್ಟದ ಮಹಿಷಾಸುರ ಪ್ರತಿಮೆಯ ಬಳಿ ಜಾತ್ಯತೀತ ಸಂಘಟನೆಗಳ ಒಕ್ಕೂಟವು ಭಾನುವಾರ ಹಮ್ಮಿಕೊಂಡಿದ್ದ ‘ಜಾತ್ಯತೀತ ಶಕ್ತಿಗಳ ಬಲವರ್ಧನೆಗೆ ಮಹಿಷನಲ್ಲಿ ಪ್ರಾರ್ಥನೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮೋದಿ ಅವರು ಸ್ವಚ್ಛ ಭಾರತ ಕಾರ್ಯಕ್ರಮವನ್ನು ಜಾರಿಗೊಳಿಸಿದ್ದು ಒಳ್ಳೆಯದೇ. ಆದರೆ, ಮೊದಲು ಅವರು ತಮ್ಮ ಆತ್ಮ, ಮನಸು, ಹೃದಯವನ್ನು ಸ್ವಚ್ಛ ಮಾಡಿಕೊಳ್ಳಲಿ. ಯುವಕರಿಗೆ ಉದ್ಯೋಗ ಸೃಷ್ಟಿಸುವ ಬದಲು ಸೂಟು, ಬೂಟು ಹಾಕಿಕೊಂಡು ವಿದೇಶ ಸುತ್ತುತ್ತಿದ್ದರೆ ಪ್ರಯೋಜನವಾಗದು ಎಂದು ಕುಟುಕಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry