ಅನರ್ಘ್ಯ, ಸಮರ್ಥ್‌ಗೆ ಪ್ರಶಸ್ತಿ

7
ಕೆನರಾ ಯೂನಿಯನ್‌ ರಾಜ್ಯ ರ‍್ಯಾಂಕಿಂಗ್‌ ಟೇಬಲ್‌ ಟೆನಿಸ್‌

ಅನರ್ಘ್ಯ, ಸಮರ್ಥ್‌ಗೆ ಪ್ರಶಸ್ತಿ

Published:
Updated:
ಅನರ್ಘ್ಯ, ಸಮರ್ಥ್‌ಗೆ ಪ್ರಶಸ್ತಿ

ಬೆಂಗಳೂರು: ಉತ್ತಮ ಆಟ ಆಡಿದ ಎಂಎಸ್‌ಎಸ್‌ಟಿಟಿಎ ಕ್ಲಬ್‌ನ ಅನರ್ಘ್ಯ ಮಂಜುನಾಥ್‌ ಮತ್ತು ಬಿಒಬಿ ಕ್ಲಬ್‌ನ ಸಮರ್ಥ್‌ ಕುರ್ದಿಕೇರಿ ಅವರು ಕೆನರಾ ಯೂನಿಯನ್‌ ರಾಜ್ಯ ರ‍್ಯಾಂಕಿಂಗ್‌ ಟೇಬಲ್‌ ಟೆನಿಸ್‌ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸಿದ್ದಾರೆ.

ಮಲ್ಲೇಶ್ವರಮ್‌ನ ಪ್ರಕಾಶ್‌ ಕೋರ್ಟ್ಸ್‌ನಲ್ಲಿ ಸೋಮವಾರ ನಡೆದ ಯೂತ್‌ ಬಾಲಕಿಯರ ಸಿಂಗಲ್ಸ್‌ ವಿಭಾಗದ ಫೈನಲ್‌ನಲ್ಲಿ ಅನರ್ಘ್ಯ 11–7, 8–11, 11–4, 11–5, 8–11, 11–6ರಲ್ಲಿ ಜಿ.ಯಶಸ್ವಿನಿ ಅವರನ್ನು ಸೋಲಿಸಿದರು.

ಸೆಮಿಫೈನಲ್‌ ಹೋರಾಟಗಳಲ್ಲಿ ಅನರ್ಘ್ಯ 10–12, 9–11, 11–7, 11–8, 14–12, 11–9ರಲ್ಲಿ ಸಂಯುಕ್ತಾ ಎದುರೂ, ಯಶಸ್ವಿನಿ 11–8, 11–5, 11–3, 6–11, 7–11, 13–11ರಲ್ಲಿ ವಿ.ಖುಷಿ ಮೇಲೂ ಗೆದ್ದಿದ್ದರು.

ಎಂಟರ ಘಟ್ಟದ ಹಣಾಹಣಿಗಳಲ್ಲಿ ಅನರ್ಘ್ಯ  6–11, 11–5, 11–5, 11–5, 11–5ರಲ್ಲಿ ಡಿ.ಕಲ್ಯಾಣಿ ಎದುರೂ, ಸಂಯುಕ್ತ 11–8, 11–8, 9–11, 11–9, 11–5ರಲ್ಲಿ ಕೌಮುದಿ ಪಟ್ನಾಕರ್‌ ಮೇಲೂ, ಖುಷಿ 11–3, 11–7, 6–11, 11–4, 5–11, 11–7ರಲ್ಲಿ ಎಂ.ವಿ.ಸ್ಫೂರ್ತಿ ವಿರುದ್ಧವೂ, ಯಶಸ್ವಿನಿ 11–9, 3–11, 11–9, 10–12, 11–2, 11–2ರಲ್ಲಿ ಅದಿತಿ ಪಿ.ಅಶೋಕ್‌ ವಿರುದ್ಧವೂ ಜಯಿಸಿದ್ದರು.

ಸಮರ್ಥ್‌ ಚಾಂಪಿಯನ್‌: ಜೂನಿಯರ್‌ ಬಾಲಕರ ಸಿಂಗಲ್ಸ್‌ ವಿಭಾಗದ ಫೈನಲ್‌ನಲ್ಲಿ ಸಮರ್ಥ್‌ 7–11, 11–8, 9–11, 11–6, 8–11, 11–3, 11–5ರಲ್ಲಿ ಎಸ್‌.ಆರ್‌.ಕೃಷ್ಣಾ ಅವರನ್ನು ಪರಾಭವಗೊಳಿಸಿದರು.

ನಾಲ್ಕರ ಘಟ್ಟದ ಪಂದ್ಯಗಳಲ್ಲಿ ಕೃಷ್ಣಾ 11–9, 6–11, 11–6, 11–8, 11–8ರಲ್ಲಿ ಶ್ರೀಕಾಂತ್ ಕಶ್ಯಪ್‌ ಎದುರೂ, ಸಮರ್ಥ್‌ 11–7, 12–10, 11–8, 11–8ರಲ್ಲಿ ಕೆ.ಜೆ.ಆಕಾಶ್‌ ವಿರುದ್ಧವೂ ವಿಜಯಿಯಾಗಿದ್ದರು.

ಕ್ವಾರ್ಟರ್‌ ಫೈನಲ್‌ ಪಂದ್ಯಗಳಲ್ಲಿ ಕೃಷ್ಣಾ 11–9, 12–10, 7–11, 11–4, 12–10ರಲ್ಲಿ ರತಿನ್‌ ಕಲೋಸ್‌ ಎದುರೂ, ಶ್ರೀಕಾಂತ್‌ 7–11, 13–11, 11–9, 5–11, 11–9, 11–2ರಲ್ಲಿ ಸುಜನ್‌ ಭಾರದ್ವಾಜ್‌ ಮೇಲೂ, ಸಮರ್ಥ್‌ 11–3, 11–4, 12–10, 11–5ರಲ್ಲಿ ವಿಷ್ಣುಭಟ್‌ ಎದುರೂ, ಆಕಾಶ್‌ 11–8, 11–1, 5–11, 11–7, 11–5ರಲ್ಲಿ ಸಮ್ಯಕ್‌ ಕಶ್ಯಪ್‌ ವಿರುದ್ಧವೂ ಗೆದ್ದಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry