ಸಾಲಕ್ಕೆ ಸಾವೊಂದೇ ಪರಿಹಾರ ಅಲ್ಲ

7
ಆತ್ಮಹತ್ಯೆಗೆ ಶರಣಾದ ರೈತರ ಕುಟುಂಬಕ್ಕೆ ಸಂಸದರ ಸಾಂತ್ವನ

ಸಾಲಕ್ಕೆ ಸಾವೊಂದೇ ಪರಿಹಾರ ಅಲ್ಲ

Published:
Updated:

ಬೆಳಗಾವಿ: ತಾಲ್ಲೂಕಿನ ನಾಗೇರಹಾಳ, ವಿರಕಿನಕೊಪ್ಪ ಗ್ರಾಮಗಳಲ್ಲಿ ಆತ್ಮಹತ್ಯೆಗೆ ಶರಣಾದ ರೈತರ ಕುಟುಂಬಕ್ಕೆ ಸಂಸದ ಸುರೇಶ ಅಂಗಡಿ ಸಾಂತ್ವನ ಹೇಳಿದರು.

ನಾಗೇರಹಾಳ ಗ್ರಾಮದ ಗಂಗಮ್ಮ ಸಿದ್ದಪ್ಪ ಚಿನ್ನನವರ (42) ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಸಾಲ ಹಾಗೂ ಕೈಗಡ ಪಡೆದಿದ್ದರು. ಸಾಲಕ್ಕೆ ಹೆದರಿ ಆತ್ಮಹತ್ಯೆಗೆ ಶರಣಾಗಿದ್ದರು.

‘ಸಾಲಕ್ಕೆ ಸಾವೊಂದೇ ಪರಿಹಾರ ಅಲ್ಲ. ಭವಿಷ್ಯ ದೊಡ್ಡದಾಗಿದೆ. ಧೈರ್ಯವಾಗಿ ಮುನ್ನುಗ್ಗಿದರೆ ಎಂಥ ಕಷ್ಟವನ್ನಾದರೂ ಜಯಿಸಲು ಸಾಧ್ಯ. ಯಾರೂ ಸಾವಿಗೆ ಶರಣಾಗಬಾರದು’ ಎಂದು ಹೇಳಿದರು.

ವಿರಕಿನಕೊಪ್ಪ ಗ್ರಾಮದ ಚಿನ್ನಪ್ಪ ಗಂಗಪ್ಪ ಅಮರಾಪೂರ (61) ಆತ್ಮಹತ್ಯೆ ಮಾಡಿಕೊಂಡಿದ್ದರು. ‘ಬಬ್ಬ ರೈತನ ಸಾವು ಒಂದು ಕುಟುಂಬದ ಮೇಟಿ ಕಳಚಿದಂತೆ’ ಎಂದು ಕುಟುಂಬಸ್ಥರಿಗೆ ಧೈರ್ಯ ತುಂಬಿದರು.

ಪರಿಹಾರ: ‘ಆತ್ಮಹತ್ಯೆಗೆ ಶರಣಾದ ರೈತ ಕುಟುಂಬಕ್ಕೆ ಸರ್ಕಾರದಿಂದ ₹ 5 ಲಕ್ಷ ಪರಿಹಾರ ನೀಡಲಾಗುವುದು. ಜನ ಸುರಕ್ಷಾ ಯೋಜನೆಯಡಿ ₹ 2 ಲಕ್ಷ ಹಾಗೂ ಮಾಸಿಕ ₹ 2000 ಪಿಂಚಣಿ, ಇತರ ಇಲಾಖೆಗಳಿಂದ ಸಿಗುವ ಸೌಲಭ್ಯಗಳ ಕುರಿತು ಬ್ಯಾಂಕ್ ಆಫ್ ಇಂಡಿಯಾ ಮ್ಯಾನೇಜರ್, ಸ್ಥಳಕ್ಕೆ ಬಂದ ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ತ್ವರಿತವಾಗಿ ಪರಿಹಾರ ಸಿಗುವಂತೆವಂತೆ ಮಾಡಬೇಕು’ ಸೂಚಿಸಿದರು.

ತಹಸೀಲ್ದಾರ್‌ ಜಕ್ಕನಗೌಡರ, ಉಪವಿಭಾಗಾಧಿಕಾರಿ ಕವಿತಾ ಯೋಗಪ್ಪನವರ, ಸಹಾಯಕ ಕೃಷಿ ನಿರ್ದೇಶಕ ಜಿ.ಬಿ. ಕಲ್ಯಾಣಿ, ಕಂದಾಯ ನಿರೀಕ್ಷಕ ಶ್ರೀಕಾಂತ ಹೈಗರ, ಬೆಳಗಾವಿ ಬಿಜೆಪಿ ಗ್ರಾಮೀಣ ಮಂಡಳದ ಅಧ್ಯಕ್ಷ ಮೋಹನ ಅಂಗಡಿ, ಬಿಜೆಪಿ ಮುಖಂಡರಾದ ರಾಜೇಶ ದನದಮನಿ, ಶಿವಾನಂದ ಗುಂಡುಗೋಳ, ಭವಾನಿ ಪಗಾದ, ಮಹಾದೇವಿ ರಾಯಣ್ಣವರ, ನಾಗಯ್ಯ ಹವಾಲ್ದಾರ, ಯಲ್ಲೇಶಿ ದೊಡವಾಡಿ, ಆನಂದ ತಳವಾರ, ಕಲ್ಲಪ್ಪ ಸಂಪಗಾಂವಿ, ಅಡಿವೆಪ್ಪ ಗಿರಣಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry