ಸರ್ಕಾರಿ ಶಾಲೆ ಸಬಲೀಕರಣಕ್ಕೆ ಸಮುದಾಯದ ಸಹಕಾರ ಅಗತ್ಯ

7

ಸರ್ಕಾರಿ ಶಾಲೆ ಸಬಲೀಕರಣಕ್ಕೆ ಸಮುದಾಯದ ಸಹಕಾರ ಅಗತ್ಯ

Published:
Updated:
ಸರ್ಕಾರಿ ಶಾಲೆ ಸಬಲೀಕರಣಕ್ಕೆ ಸಮುದಾಯದ ಸಹಕಾರ ಅಗತ್ಯ

ಪಾಂಡವಪುರ: ಪೋಷಕರು ಮತ್ತು ಕೆಲವು ದಾನಿಗಳಿಂದ ಉನ್ನತೀಕರಣ ಗೊಳ್ಳುತ್ತಿರುವ ‘ಫ್ರೆಂಚ್‌ ರಾಕ್ಸ್‌ ಶತಮಾನದ ಸರ್ಕಾರಿ ಶಾಲೆ’ಯನ್ನು ಸರ್ಕಾರ ಮಾದರಿಯಾಗಿ ಸ್ವೀಕರಿಸಿ ರಾಜ್ಯದ ಎಲ್ಲ ಸರ್ಕಾರಿ ಶಾಲೆಗಳನ್ನು ಸಬಲೀಕರಣಗೊಳಿಸ ಬಹುದು ಎಂದು ಬಹುಭಾಷಾ ನಟ ಪ್ರಕಾಶ್‌ ರೈ ಹೇಳಿದರು.

ಪಟ್ಟಣದ ಫ್ರೆಂಚ್‌ ರಾಕ್ಸ್ ಶತಮಾನ ಶಾಲೆಗೆ ಸೋಮವಾರ ಭೇಟಿ ನೀಡಿದ ಅವರು, ಸರ್ಕಾರಿ ಶಾಲೆಗಳನ್ನು ಸಬಲೀಕರಿಸುವ ಹೊಣೆಗಾರಿಕೆ ಪೋಷಕರು ಮತ್ತು ಸಮುದಾಯದ ಮೇಲಿದೆ ಎಂದರು.

ಖಾಸಗಿ ಶಾಲೆ ಮತ್ತು ಖಾಸಗಿ ಆಸ್ಪತ್ರೆಗಳಿಗೆ ಜಾಹೀರಾತು ನೀಡಿ ಪ್ರವೇಶ ನೀಡಲಾಗುತ್ತಿದೆ. ಇಂತಹ ಖಾಸಗಿ ಒಡೆತನದ ಮಾಫಿಯಾ ವಿರುದ್ಧ ಜನಸಮುದಾಯವೇ ಎದ್ದು ನಿಲ್ಲಬೇಕಿದೆ ಎಂದರು.

ಫ್ರೆಂಚ್‌ ರಾಕ್ಸ್ ಶತಮಾನ ಸರ್ಕಾರಿ ಶಾಲೆಯ ಉನ್ನತಿಗಾಗಿ ಮುಖ್ಯಶಿಕ್ಷಕ ಡಿ.ಸಿ.ಯೋಗಣ್ಣ, ಎಸ್‌ಡಿಎಂಸಿ ಅಧ್ಯಕ್ಷ ಎನ್.ಕೃಷ್ಣೇಗೌಡ ಅವರು ಪ್ರಕಾಶ್‌ ರೈಗೆ ಮನವಿ ಸಲ್ಲಿಸಿದರು. ಜ‌ಸ್ಟ್ ಆಸ್ಕ್‌ ಫೌಂಡೇಷ್‌ನಿಂದ ಶಾಲೆಯ ಅಭಿವೃದ್ಧಿಗಾಗಿ ನೆರವು ನೀಡುವುದಾಗಿ ಅವರು ಭರವಸೆ ನೀಡಿದರು. ‘ಸಮಾನ ಶಿಕ್ಷಣಕ್ಕಾಗಿ ಜನಾಂದೋಲನ’ದ ಮಲ್ಲಿಗೆ, ಮುತ್ತುರಾಜ್‌, ಶಾಲೆಯ ಉನ್ನತೀಕರಣ ಸಮಿತಿಯ ಖಜಾಂಚಿ ಎಚ್‌.ಆರ್‌.ಧನ್ಯಕುಮಾರ್, ಸಂಚಾಲಕ ರಾಜೀವ್‌, ಸದಸ್ಯ ಎಂ.ಎಚ್.ನಂದೀಶ್‌, ಹಿರಿಯ ರಾಜಕಾರಣಿ ಮಹದೇಶ್ವರಪುರ ರಾಮಚಂದ್ರ, ಡೇರಿ ನಿವೃತ್ತ ಅಧಿಕಾರಿ ಹುಚ್ಚೇಗೌಡ ಇದ್ದರು. ಪ್ರಕಾಶ್‌ ರೈ ಶಾಲಾ ಮಕ್ಕಳೊಂದಿಗೆ ಮಾತುಕತೆ ನಡೆಸಿದರಲ್ಲದೇ ಮಧ್ಯಾಹ್ನದ ಬಿಸಿಯೂಟವನ್ನೂ ಮಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry