ಸರ್ಕಾರದ ಸೂಚನೆ ಕಡೆಗಣನೆ: ರೈತನ ವಿರುದ್ಧ ದೂರು

7

ಸರ್ಕಾರದ ಸೂಚನೆ ಕಡೆಗಣನೆ: ರೈತನ ವಿರುದ್ಧ ದೂರು

Published:
Updated:

ಮೊಗಾ (ಪಂಜಾಬ್‌): ರಾಜ್ಯ ಸರ್ಕಾರ ನಿಗದಿಪಡಿಸಿದ ಸಮಯಕ್ಕೆ ಮುನ್ನವೇ ತನ್ನ ಗದ್ದೆಯಲ್ಲಿ ಭತ್ತದ ಸಸಿಗಳನ್ನು ನಾಟಿ ಮಾಡಿದ ರೈತರೊಬ್ಬರ ವಿರುದ್ಧ ಪೊಲೀಸರು ಮಂಗಳವಾರ ಪ್ರಕರಣ ದಾಖಲಿಸಿದ್ದಾರೆ.

ಅಂತರ್ಜಲ ಮಟ್ಟ ಕುಸಿಯದಂತೆ ಕ್ರಮ ತೆಗೆದುಕೊಳ್ಳುವ ನಿಟ್ಟಿನಲ್ಲಿ, ಜೂನ್‌ 20ಕ್ಕಿಂತ ಮುನ್ನ ಭತ್ತದ ಸಸಿಗಳನ್ನು ನಾಟಿ ಮಾಡಬಾರದು ಎಂದು ಸರ್ಕಾರ ನಿರ್ದೇಶಿಸಿತ್ತು.

ಆದರೆ ಮೊಗಾ ಜಿಲ್ಲೆಯ ಸೆಖನ್ ಕಲನ್ ಗ್ರಾಮದ ಮಾಜಿ ಪ್ರಮುಖ ಗುರ್ಮೀತ್‌ ಸಿಂಗ್‌ ಈ ನಿರ್ದೇಶನವನ್ನು ಉಲ್ಲಂಘಿಸಿದ್ದುದು ಜಿಲ್ಲಾ ಕೃಷಿ ಅಧಿಕಾರಿಗಳು ಹಾಗೂ ಪೊಲೀಸರ ಗಮನಕ್ಕೆ ಬಂದಿತು.

ಸಿಂಗ್‌ ವಿರುದ್ಧದ ಕ್ರಮ ಖಂಡಿಸಿ ಹಲವಾರು ರೈತರು ಪ್ರತಿಭಟನೆ ನಡೆಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry