ಭಾರತೀಯ ವಿದ್ಯಾರ್ಥಿ ಮೇಲೆ ಜನಾಂಗೀಯ ನಿಂದನೆ

7

ಭಾರತೀಯ ವಿದ್ಯಾರ್ಥಿ ಮೇಲೆ ಜನಾಂಗೀಯ ನಿಂದನೆ

Published:
Updated:

ಲಂಡನ್‌: ಹಿಜಾಬ್‌ ಧರಿಸಿದ್ದ ಮಹಿಳೆಯ ಬೆಂಬಲಕ್ಕೆ ನಿಂತ ಭಾರತ ಸಂಜಾತ ವಿದ್ಯಾರ್ಥಿಗೆ ಬಿಳಿಯ ವ್ಯಕ್ತಿಯೊಬ್ಬ ಜನಾಂಗೀಯವಾಗಿ ನಿಂದಿಸಿ, ಬ್ರಿಟನ್‌ ಬಿಟ್ಟು ತೊಲಗು ಎಂದು ಹೇಳಿದ್ದಾಗಿ ಮಾಧ್ಯಮಗಳು ವರದಿ ಮಾಡಿವೆ.

ಕೆಂಬ್ರಿಜ್ ವಿಶ್ವವಿದ್ಯಾಲಯದಲ್ಲಿ ರಾಜ್ಯಶಾಸ್ತ್ರ ಕಲಿಯುತ್ತಿರುವ 28 ವರ್ಷದ ವಿದ್ಯಾರ್ಥಿ ರಿಕೇಶ್ ಅಡ್ವಾಣಿ ಮೇಲೆ ಜನಾಂಗೀಯ ದಾಳಿ ನಡೆದಿದೆ ಎಂದು ಕೇಂಬ್ರಿಜ್‌ ನ್ಯೂಸ್‌ ವರದಿ ಮಾಡಿದೆ.

ಕೇಂಬ್ರಿಜ್ ಆಸ್ಪತ್ರೆಯಲ್ಲಿ ರಿಕೇಶ್ ಅಡ್ವಾಣಿ ನಿಂತಿದ್ದರು. ಅಲ್ಲಿಗೆ ಬಂದ ಹಿಜಾಬ್ ಧರಿಸಿದ್ದ ರೋಗಿಯನ್ನು ಕುರಿತು ಬಿಳಿಯ ವ್ಯಕ್ತಿಯೊಬ್ಬರು ಅವಾಚ್ಯವಾಗಿ ನಿಂದಿಸಿದ್ದರು. ಇದಕ್ಕೆ ರಿಕೇಶ್‌ ಆಕ್ಷೇಪಿಸಿದಾಗ ನಿಂದಿಸಲಾಯಿತು ಎಂದು ವರದಿಯಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry