ಒಂದು ವರ್ಷದವರೆಗೆ ನನ್ನನ್ನು ಯಾರು ಟಚ್‌ ಮಾಡಲ್ಲ: ಎಚ್‌.ಡಿ.ಕುಮಾರಸ್ವಾಮಿ

7

ಒಂದು ವರ್ಷದವರೆಗೆ ನನ್ನನ್ನು ಯಾರು ಟಚ್‌ ಮಾಡಲ್ಲ: ಎಚ್‌.ಡಿ.ಕುಮಾರಸ್ವಾಮಿ

Published:
Updated:
ಒಂದು ವರ್ಷದವರೆಗೆ ನನ್ನನ್ನು ಯಾರು ಟಚ್‌ ಮಾಡಲ್ಲ: ಎಚ್‌.ಡಿ.ಕುಮಾರಸ್ವಾಮಿ

ಬೆಂಗಳೂರು: ‘ಜುಲೈ ಮೊದಲ ವಾರದಲ್ಲಿ ರಾಜ್ಯದ ಬಜೆಟ್ ಮಂಡನೆ ಮಾಡುವೆ’ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ತಿಳಿಸಿದರು.

ಲೆಕ್ಕಪರಿಶೋಧಕರ 15ನೇ ರಾಜ್ಯ ಮಟ್ಟದ ಸಮ್ಮೇಳನದಲ್ಲಿ ಅವರು ಮಾತನಾಡಿದರು.

‘ಇನ್ನು ಒಂದು ವರ್ಷದ ವರೆಗೆ ನನ್ನನ್ನು ಯಾರು ಟಚ್ ಮಾಡುವುದಿಲ್ಲ. ಲೋಕಸಭಾ ಚುನಾವಣೆ ವರೆಗೆ ಇದೇ ಸರ್ಕಾರ ಇರುತ್ತದೆ ಎನ್ನುವ ಭರವಸೆ ಇದೆ’ ಎಂದರು.

‘ನನ್ನ ಎಲ್ಲಾ ಯೋಜನೆಗಳನ್ನು ಅನುಷ್ಠಾನಕ್ಕೆ ತರುತ್ತೇನೆ. ಯಾವುದರಿಂದಲೂ ಜಾರಿಕೊಳ್ಳುವುದಿಲ್ಲ. ಆರ್ಥಿಕ ಶಿಸ್ತಿನ ಅಡಿಯೊಳಗೆ ಸಾಲ ಮನ್ನ ಮಾಡುವೆ. ಈಗಾಗಲೇ ಬ್ಯಾಂಕ್ ಅಧಿಕಾರಿಗಳೊಂದಿಗೆ ಚರ್ಚಿಸಿದ್ದೇನೆ’ ಎಂದರು.

‘ಮಾಧ್ಯಮ ವಾಹಿನಿಗಳು ರಾಜಕೀಯ ಚರ್ಚೆ ಮಾಡುವುದನ್ನು ನಿಲ್ಲಿಸಿ, ಸಮಸ್ಯೆಗಳ ಬಗ್ಗೆ ಮಾತನಾಡಿ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry