‘ಅಪ್ಪ–ಅಮ್ಮ ಬೇಕು’

7

‘ಅಪ್ಪ–ಅಮ್ಮ ಬೇಕು’

Published:
Updated:
‘ಅಪ್ಪ–ಅಮ್ಮ ಬೇಕು’

1. ನನಗೆ 16 ವರ್ಷ, ನಾನು ಅಪ್ಪನ ಜೊತೆಯಲ್ಲಿ ಇದ್ದೇನೆ. ನಮ್ಮ ಅಮ್ಮ ಅಜ್ಜಿ ಮನೆಯಲ್ಲಿ ಇದ್ದಾರೆ. ಅಪ್ಪ ಬೇರೆ ಸಂಬಂಧದಲ್ಲಿದ್ದಾರೆ. ನನಗೆ ಅಪ್ಪ–ಅಮ್ಮನನ್ನು ಒಂದು ಮಾಡುವ ಆಸೆ. ನಾವು ಮೂರು ಜನ ಅಕ್ಕ–ತಂಗಿಯರು. ನಮಗೆ ಅಪ್ಪನೂ ಬೇಕು, ಅಮ್ಮನೂ ಬೇಕು.

–ಹೆಸರು, ಊರು ಬೇಡ

ಉತ್ತರ
: ನಿಮ್ಮ ನೋವನ್ನು ನಾನು ಅರ್ಥ ಮಾಡಿಕೊಳ್ಳಬಲ್ಲೆ. ನೀವೀಗ ಪ್ರಬುದ್ಧರಾಗಿರುವುದರಿಂದ ಸಂದರ್ಭವನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಬಲ್ಲಿರಿ. ನಿಮ್ಮ ಸಮಸ್ಯೆ ತುಂಬಾ ಸೂಕ್ಷ್ಮವಾದದ್ದು. ಈ ಸಮಸ್ಯೆಯ ಚರ್ಚೆ ಇಲ್ಲಿ ಸೂಕ್ತವಾದುದ್ದಲ್ಲ. ನಿಮ್ಮ ಅಪ್ಪ, ಅಮ್ಮ ಇಬ್ಬರ ಅಭಿಪ್ರಾಯವನ್ನು ಆಲಿಸಬೇಕಾಗುತ್ತದೆ. ಹಾಗಾಗಿ ಮನೆಯ ಹಿರಿಯರ ಬಳಿ ನಿಮ್ಮ ಪೋಷಕರ ಜೊತೆಯಲ್ಲಿ ಮಾತನಾಡಲು ಹೇಳಿ. ಆಪ್ತ ಸಮಾಲೋಚಕರನ್ನು ಭೇಟಿಯಾಗುವಂತೆ ನಿಮ್ಮ ಪೋಷಕರ ಮನವೊಲಿಸಿ. ಇದರಿಂದ ನಿಮ್ಮ ಸಮಸ್ಯೆಗೆ ಪರಿಹಾರ ಸಿಗಬಹುದು.

2. ನಾನೊಬ್ಬ ದೃಶ್ಯಮಾಧ್ಯಮದ ವರದಿಗಾರ. ಸ್ಥಳೀಯ ಚಾನೆಲ್‌ನಿಂದ ರಾಜ್ಯಮಟ್ಟದ ಚಾನೆಲ್ ಒಂದಕ್ಕೆ ವರದಿಗಾರನಾಗಿ ಆಯ್ಕೆಯಾಗಿದ್ದೇನೆ. ನನ್ನ ಸಮಸ್ಯೆ ಎಂದರೆ ನಾನು ಕ್ಯಾಮೆರಾ ಮುಂದೆ ನಿಂತು ಮಾತನಾಡುವಾಗ ಮಾತು ತೊದಲುತ್ತದೆ. ಕ್ಯಾಮೆರಾ ಮುಂದೆ ನಿಂತು ಮಾತನಾಡುವ ಧೈರ್ಯ ನನ್ನಲ್ಲಿದೆ. ಆದರೂ ಮಾತು ತೊದಲುತ್ತದೆ. ಬಾಯಿಯಲ್ಲಿ ತೇವ ಕಡಿಮೆಯಾಗುತ್ತದೆ.

–ಪ್ರವೀಣ್, ಬೆಳಗಾವಿ


ಉತ್ತರ: ನೀವು ವರದಿಗಾರ ವೃತ್ತಿಗೆ ಆಯ್ಕೆಯಾಗಿದ್ದೀರಿ ಎಂದ ಮೇಲೆ ನಿಮ್ಮಲ್ಲಿ ಪ್ರತಿಭೆ, ಸಾಮರ್ಥ್ಯವಿದೆ ಎಂದರ್ಥ. ನೀವೇ ಹೇಳಿದ ಹಾಗೆ ನಿಮಗೆ ಕ್ಯಾಮೆರಾ ಮುಂದೆ ನಿಂತು ಮಾತನಾಡುವ ಧೈರ್ಯವಿದೆ. ಅಭ್ಯಾಸ ಮಾಡುವುದರಿಂದ ಸುಲಲಿತವಾಗಿ ನೀವು ಕ್ಯಾಮೆರಾ ಎದುರಿಸಬಲ್ಲಿರಿ. ಸ್ವಲ್ಪ ದಿನ ವೃತ್ತಿಯಲ್ಲಿ ಪರಿಣತಿ ಗಳಿಸಿದ ನಂತರ ಸುಲಭವಾಗಿ ಕೆಲಸ ಮಾಡಬಲ್ಲಿರಿ. ಕೆಲಸ ಮಾಡುವಾಗ ಏನಾಗಬಹುದೋ ಎಂಬ ಆತಂಕ ನಿಮ್ಮನ್ನು ಕಾಡುತ್ತಿದೆ. ಬಾಯಿ ಒಣಗಿದಂತೆ ಆದ ತಕ್ಷಣ ನೀರು ಕುಡಿಯಿರಿ. ಮನೆಯಲ್ಲಿ ಕನ್ನಡಿಯ ಮುಂದೆ ನಿಂತು ವರದಿಗಾರಿಕೆ ಅಭ್ಯಾಸ ಮಾಡಿ. ಇದು ನಿಮ್ಮ ಕೆಲಸವನ್ನು ಸುಲಭವಾಗಿಸುತ್ತದೆ.

ಏನಾದ್ರೂ ಕೇಳ್ಬೋದು

ಕೌಟುಂಬಿಕ ಸಮಸ್ಯೆ, ವೈಯಕ್ತಿಕ ಹಾಗೂ ಮಾನಸಿಕ ಸಮಸ್ಯೆಗಳ ಕುರಿತು ಪ್ರಶ್ನೆಗಳನ್ನು ನಮಗೆ ಕಳುಹಿಸಿ. ನಿಮ್ಮ ಪ್ರಶ್ನೆಗಳಿಗೆ ಆಪ್ತ ಸಮಾಲೋಚಕಿ ಸುನೀತಾ ರಾವ್ ಉತ್ತರಿಸಲಿದ್ದಾರೆ.

ಇಮೇಲ್ ವಿಳಾಸ; bhoomika@prajavani.co.in ವಾಟ್ಸ್ಯಾಪ್: 9482006746

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry