ಮಜಗಾವ್ ಡಾಕ್ನಲ್ಲಿ ಯುದ್ಧನೌಕೆ ನಿರ್ಮಾಣ ಕಾರ್ಯಾರಂಭ

ಮುಂಬಯಿ, ಜೂ. 15– ಎರಡನೆ ವರ್ಗದ ಯುದ್ಧನೌಕೆ ನಿರ್ಮಾಣ ಕಾರ್ಯ ಮಜಗಾವ್ ಹಡಗುಕಟ್ಟೆಯಲ್ಲಿ ಪ್ರಾರಂಭವಾಗಿದೆ.

ಕೇಂದ್ರ ರಕ್ಷಣಾ ಉತ್ಪಾದನೆ ಶಾಖೆ ಸಚಿವ ಎಲ್.ಎನ್. ಮಿಶ್ರ ಅವರು ಇಂದು ಇಲ್ಲಿಗೆ ಭೇಟಿಯಿತ್ತಾಗ ಹಡಗುಕಟ್ಟೆ ಅಧಿಕಾರಿಗಳು ಈ ವಿಷಯವನ್ನು ಬಹಿರಂಗಪಡಿಸಿದರು.

ಅಗ್ಗದ ಬೆಲೆಗೆ ಅಕ್ರಮ ಚೀನಿ ಸಾಮಗ್ರಿ

ನವದೆಹಲಿ, ಜೂ. 15– ನಂಬುವುದಕ್ಕೇ ಸಾಧ್ಯವಿಲ್ಲದಷ್ಟು ಅಗ್ಗದ ಬೆಲೆಗೆ ಉತ್ತರ ಪ್ರದೇಶದ ಬಸ್ತಿ ಜಿಲ್ಲೆಯಲ್ಲಿ ಅಕ್ರಮ ಸಾಗಾಣಿಕೆಯ ಚೀನೀ ಸರಕು ಸುಲಭವಾಗಿ ದೊರಕುತ್ತಿವೆ.

ಒಂದು ಚೀನೀ ಟ್ರಾನ್ಸಿಸ್ಟರ್ಗೆ 100 ರಿಂದ 150 ರೂ. ಬೆಲೆ ಮಾತ್ರ, ಅದೇ ಭಾರತದಲ್ಲಿ ತಯಾರಿಸಿದ್ದರೆ ಬೆಲೆ 300 ರಿಂದ 350 ರೂ. ದೊಡ್ಡ ಗಾತ್ರದ ಟೂತ್ಪೇಸ್ಟ್ ಪೊಟ್ಟಣಕ್ಕೆ 1.50 ರೂ. ಮಾತ್ರ, ಭಾರತದಲ್ಲಿ ತಯಾರಾದುದಕ್ಕೆ ಸುಮಾರು 4.50 ರೂ. ಒಂದು ಡಬ್ಬ ಬೂಟ್ಪಾಲಿಷ್ಗೆ 50 ಪೈಸೆ ಮಾತ್ರ.

50 ರೂ.ಗೆ ಗಡಿಯಾರ: ಬಸ್ತಿ ಜಿಲ್ಲೆಯಲ್ಲಿ ಎಚ್.ಎಂ.ಟಿ. ಗಡಿಯಾರವನ್ನು ಯಾರೂ ಕೇಳುವುದೇ ಇಲ್ಲ. ಕಾರಣ 50–60 ರೂ. ಗಳಿಗೆಲ್ಲ ಚೀನೀ ಗಡಿಯಾರ ಕೊಳ್ಳುವುದು ಸುಲಭ.

‘ಸಿಕ್ಕಾಪಟ್ಟೆ ಅಗ್ಗದ ಬೆಲೆಯ’ ಚೀನೀ ಟೆರಿಲಿನ್ ಷರ್ಟ್ ಮತ್ತು ಬುಷ್ಷರ್ಟ್ ಗಳೆಂದರೆ ಜನರಿಗೊಂದು ಹುಚ್ಚು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.