ಸಭಾನಾಯಕಿ ಪಟ್ಟ: ವಿರೋಧ

7

ಸಭಾನಾಯಕಿ ಪಟ್ಟ: ವಿರೋಧ

Published:
Updated:
ಸಭಾನಾಯಕಿ ಪಟ್ಟ: ವಿರೋಧ

ಬೆಂಗಳೂರು: ಸಚಿವೆ ಜಯಮಾಲಾ ಅವರನ್ನು ವಿಧಾನಪರಿಷತ್‌ ಸಭಾನಾಯಕಿಯಾಗಿ ನೇಮಕ ಮಾಡುವುದನ್ನು ಕಾಂಗ್ರೆಸ್‌ ಹಿರಿಯ ಸದಸ್ಯರು ವಿರೋಧಿಸಿದ್ದು, ಈ ಸಂಬಂಧ ಸಹಿ ಸಂಗ್ರಹವನ್ನೂ ಆರಂಭಿಸಿದ್ದಾರೆ.

ಕಾಂಗ್ರೆಸ್‌ನ ಹಿರಿಯ ಸದಸ್ಯ ಪ್ರತಾಪಚಂದ್ರ ಶೆಟ್ಟಿ ಅವರನ್ನು ಬಿಟ್ಟು ಉಳಿದ ಎಲ್ಲ ಹಿರಿಯ ಸದಸ್ಯರು ಜಯಮಾಲಾ ಸಭಾನಾಯಕಿ ಆಗುವುದನ್ನು ವಿರೋಧಿಸಿದ್ದಾರೆ. ‘ಇವರನ್ನು ಸಭಾ ನಾಯಕರನ್ನಾಗಿ ಮಾಡಿದರೆ, ತಾವು ಸದನಕ್ಕೆ ಹಾಜರಾಗುವುದಿಲ್ಲ’ ಎಂಬುದಾಗಿ ವರಿಷ್ಠರ ಮೇಲೆ ಒತ್ತಡ ಹೇರಲು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ

‘ಜಯಮಾಲಾ ವಿಧಾನಪರಿಷತ್ತಿಗೆ ಮೊದಲ ಬಾರಿಗೆ ಆಯ್ಕೆ ಆಗಿರುವುದು ಮಾತ್ರವಲ್ಲದೆ, ಸದನದಲ್ಲಿ ಕೆಲಸ ಮಾಡಿದ ಅನುಭವ ಇಲ್ಲ. ಸದನದಲ್ಲಿ ಸರ್ಕಾರವನ್ನು ಸಮರ್ಥಿಸಿಕೊಳ್ಳುವುದು ಮತ್ತು ವಿರೋಧ ಪಕ್ಷಗಳಿಗೆ ಉತ್ತರ ನೀಡಲು ಅನುಭವ ಇರಬೇಕು. ಇಲ್ಲವಾದರೆ ಸರ್ಕಾರ ನಗೆಪಾಟಿಲಿಗೆ ತುತ್ತಾಗಬೇಕಾಗುತ್ತದೆ’ ಎಂದು ಹೇಳಿವೆ.

‘ಜಯಮಾಲ ಅವರನ್ನು ವಿರೋಧಿಸಬೇಕು ಎಂಬುದು ನಮ್ಮ ಉದ್ದೇಶವಲ್ಲ. ಸದನದಲ್ಲಿ ವಿರೋಧ ಪಕ್ಷದ ಆಕ್ರಮಣಕಾರಿ ನಡೆಯನ್ನು ತಡೆಯಲು ಇವರಿಂದ ಸಾಧ್ಯವೆ. ಇವರು ಒಂದು ದಿನವೂ  ಪ್ರಧಾನಿ ಮೋದಿ,ಯಡಿಯೂರಪ್ಪ ಮತ್ತು ಬಿಜೆಪಿಯನ್ನು ಟೀಕಿಸಿದವರಲ್ಲ. ಹೀಗಿರುವಾಗ ಎಷ್ಟರ ಮಟ್ಟಿಗೆ ಸದನವನ್ನು ನಿಭಾಯಿಸಬಲ್ಲರು’ ಎಂದು ಕಾಂಗ್ರೆಸ್‌ನ ಹಿರಿಯ ನಾಯಕರೊಬ್ಬರು ಪ್ರಶ್ನಿಸಿದ್ದಾರೆ.

‘ಸಭಾ ನಾಯಕರಾದವರಿಗೆ ಮೇಲ್ಮನೆಯ ನಿಯಮಗಳು, ಕಾನೂನು ಮತ್ತು ಸಂವಿಧಾನದ ಅರಿವು ಇರಬೇಕು. ಜಯಮಾಲಾ ಮೂಲತಃ ಕಲಾವಿದರು. ರಾಜಕಾರಣಿಯಲ್ಲ. ಇವರಿಂದ ಕಲಾಪ ನಿಭಾಯಿಸುವುದು ಕಷ್ಟ. ಯಾರಾದರೊಬ್ಬರು ಹಿರಿಯರಿಗೆ ಅವಕಾಶ ನೀಡಬೇಕಿತ್ತು’ ಎಂದು ಅವರು ತಿಳಿಸಿದ್ದಾರೆ.

‘ವಿ.ಎಸ್‌.ಉಗ್ರಪ್ಪ, ಕೆ.ಸಿ.ಕೊಂಡಯ್ಯ, ಸಿ.ಎಂ.ಇಬ್ರಾಹಿಂ, ಎಚ್‌.ಎಂ.ರೇವಣ್ಣ, ಅಲ್ಲಂ ವೀರಭದ್ರಪ್ಪ, ಸೀತಾರಾಮ್‌ ಅವರಂತಹ ಹಿರಿಯರಿ

ದ್ದಾರೆ. ಅವರ ಹಿರಿತನ ಮತ್ತು ಅನುಭವವನ್ನು ಕಡೆಗಣಿಸಿದಂತಾಗಿದೆ. ಪ್ರಸ್ತುತ ರಾಜಕೀಯವೇ ಯುದ್ಧದ ಸನ್ನಿವೇಶ ಇದ್ದಂತಿದೆ. ಇಂತಹ ಸಂದರ್ಭದಲ್ಲಿ ಗಟ್ಟಿ ನಾಯಕರೂ ಮುಂಚೂಣಿಯಲ್ಲಿರಬೇಕಲ್ಲವೆ’ ಎಂದು ಪ್ರಶ್ನಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry