ಕೊರಟಗೆರೆ: ಕೋಳಿ ಶೆಡ್‌ಗೆ ನುಗ್ಗಿದ ಚಿರತೆ

7

ಕೊರಟಗೆರೆ: ಕೋಳಿ ಶೆಡ್‌ಗೆ ನುಗ್ಗಿದ ಚಿರತೆ

Published:
Updated:
ಕೊರಟಗೆರೆ: ಕೋಳಿ ಶೆಡ್‌ಗೆ ನುಗ್ಗಿದ ಚಿರತೆ

ಕೊರಟಗೆರೆ: ತಾಲ್ಲೂಕಿನ ತುಂಬಾಡಿ ಗ್ರಾಮದ ಹತ್ತಿರ ಮಾರುತಿ ಎಂಬುವವರ ಕೋಳಿ ಶೆಡ್ ಗೆ ಚಿರತೆ ನುಗ್ಗಿದೆ.

ಅನೇಕ ಕೋಳಿಗಳು ಚಿರತೆಗೆ ಬಲಿಯಾಗಿವೆ. ರಾತ್ರಿ ಶೆಡ್ ಮೇಲಿಂದ ಒಳಗಡೆ ಚಿರತೆ ಬಿದ್ದಿದೆ.

ಬೆಳಿಗ್ಗೆ ಕೋಳಿಗಳಿಗೆ ಆಹಾರ ಹಾಕಲು ಕೆಲಸದವರು ಬಾಗಿಲು ತೆರೆಯುತ್ತಿದ್ದಂತೆಯೇ ಚಿರತೆ ಕಂಡಿದೆ. ಚಿರತೆ ಕಂಡ ತಕ್ಷಣ ಬಾಗಿಲು ಹಾಕಿದ್ದಾರೆ.

ಬಳಿಕ ಗ್ರಾಮಸ್ಥರು, ಅರಣ್ಯ ಇಲಾಖೆಯವರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಅಧಿಕಾರಿ, ಸಿಬ್ಬಂದಿ ಚಿರತೆ ಹಿಡಿಯಲು ಸಿದ್ಧತೆ ನಡೆಸಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry