7
ಆಹಾರ ಪದಾರ್ಥಗಳು ತುಟ್ಟಿಯಾದ ಪರಿಣಾಮ

ಚಿಲ್ಲರೆ ಹಣದುಬ್ಬರ ಅಲ್ಪ ಏರಿಕೆ

Published:
Updated:
ಚಿಲ್ಲರೆ ಹಣದುಬ್ಬರ ಅಲ್ಪ ಏರಿಕೆ

ನವದೆಹಲಿ: ಕೆಲವು ಆಹಾರ ಪದಾರ್ಥಗಳ ಬೆಲೆ ಹೆಚ್ಚಾಗಿರುವುದರಿಂದ ಮೇ ತಿಂಗಳಿನಲ್ಲಿ ಚಿಲ್ಲರೆ ಹಣದುಬ್ಬರವು ಶೇ 4.87ಕ್ಕೆ ಅಲ್ಪ ಏರಿಕೆ ಕಂಡಿದೆ.

ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ) ಆಧರಿಸಿದ ಹಣದುಬ್ಬರ ಏಪ್ರಿಲ್‌ನಲ್ಲಿ ಶೇ 4.58ರಷ್ಟಿತ್ತು. ಇದಕ್ಕೆ ಹೋಲಿಸಿದರೆ ಮೇನಲ್ಲಿ ಶೇ 0.29 ರಷ್ಟು ಹೆಚ್ಚಾಗಿದೆ.

2017ರ ಮೇ ತಿಂಗಳಿನಲ್ಲಿ ಶೇ 2.18 ರಷ್ಟಿತ್ತು ಎಂದು ಕೇಂದ್ರೀಯ ಸಾಂಖ್ಯಿಕ ಕಚೇರಿ (ಸಿಎಸ್‌ಒ) ಮಾಹಿತಿ ನೀಡಿದೆ.

ಆಹಾರ ಹಣದುಬ್ಬರ ಶೇ 2.8 ರಿಂದ ಶೇ 3.10ಕ್ಕೆ ಏರಿಕೆಯಾಗಿದೆ.

ಮೇ ತಿಂಗಳ ಹಣದುಬ್ಬರವು ಆರ್‌ಬಿಐ ಮಧ್ಯಮಾವಧಿಗೆ ನಿಗದಿ ಮಾಡಿರುವುದಕ್ಕಿಂತಲೂ ಗರಿಷ್ಠ ಮಟ್ಟದಲ್ಲಿಯೇ ಇದೆ.

ಹಣದುಬ್ಬರ ಹೆಚ್ಚಾಗುವ ಅಂದಾಜನ್ನು ಇಟ್ಟುಕೊಂಡು ಆರ್‌ಬಿಐ ಜೂನ‌ 6 ರಂದು ರೆಪೊ ದರಗಳನ್ನು ಶೇ0.25 ರಷ್ಟು ಹೆಚ್ಚಿಸಿದೆ. 2014ರ ಬಳಿಕ ಇದೇ ಮೊದಲ ಬಾರಿಗೆ ಬಡ್ಡಿದರಗಳಲ್ಲಿ ಏರಿಕೆ ಮಾಡಿದೆ.

ಪ್ರಸಕ್ತ ಹಣಕಾಸು ವರ್ಷದಲ್ಲಿ ಚಿಲ್ಲರೆ ಹಣದುಬ್ಬರವನ್ನು ಶೇ 4.4ರಲ್ಲಿ ನಿಯಂತ್ರಿಸುವುದಾಗಿ ಹೇಳಿತ್ತು. ಆದರೆ ಪರಿಷ್ಕೃತ ಅಂದಾಜಿನಲ್ಲಿ ಶೇ 4.7ಕ್ಕೆ ಹೆಚ್ಚಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry