ಸೆಮಿಫೈನಲ್‌ನಲ್ಲಿ ಸೋತ ಅಜಯ್‌ ಜಯರಾಮ್‌

7

ಸೆಮಿಫೈನಲ್‌ನಲ್ಲಿ ಸೋತ ಅಜಯ್‌ ಜಯರಾಮ್‌

Published:
Updated:
ಸೆಮಿಫೈನಲ್‌ನಲ್ಲಿ ಸೋತ ಅಜಯ್‌ ಜಯರಾಮ್‌

ಫುಲ್ಲರ್ಟನ್‌, ಅಮೆರಿಕ: ಭಾರತದ ಅಜಯ್‌ ಜಯರಾಮ್‌ ಅವರು ಅಮೆರಿಕ ಓಪನ್‌ ವಿಶ್ವ ಟೂರ್‌ ಸೂಪರ್‌ 300 ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಫೈನಲ್‌ ಪ್ರವೇಶಿಸಲು ವಿಫಲರಾಗಿದ್ದಾರೆ.

ಫುಲ್ಲರ್ಟನ್‌ ಟೈಟಾನ್‌ ಜಿಮ್‌ನಲ್ಲಿ ಭಾನುವಾರ ನಡೆದ ಪುರುಷರ ಸಿಂಗಲ್ಸ್‌ ವಿಭಾಗದ ಸೆಮಿಫೈನಲ್‌ನಲ್ಲಿ ಜಯರಾಮ್‌ 13–21, 21–23ರ ನೇರ ಗೇಮ್‌ಗಳಿಂದ ನೆದರ್‌ಲ್ಯಾಂಡ್ಸ್‌ನ ಮಾರ್ಕ್‌ ಕ್ಯಾಲ್‌ಜುವ್‌ ವಿರುದ್ಧ ಪರಾಭವಗೊಂಡರು. ಈ ಹೋರಾಟ 36 ನಿಮಿಷ ನಡೆಯಿತು.

30ರ ಹರೆಯದ ಜಯರಾಮ್‌ ಮೊದಲ ಗೇಮ್‌ನಲ್ಲಿ ಪರಿಣಾಮಕಾರಿ ಆಟ ಆಡಲು ವಿಫಲರಾದರು. ಹಲವು ತಪ್ಪುಗಳನ್ನು ಮಾಡಿದ ಅವರು 3–11ರಲ್ಲಿ ಹಿನ್ನಡೆ ಕಂಡರು. ವಿರಾಮದ ನಂತರ ಭಾರತದ ಆಟಗಾರ ತಿರುಗೇಟು ನೀಡಬಹುದೆಂಬ ನಿರೀಕ್ಷೆಯೂ ಹುಸಿಯಾಯಿತು. ಚುರುಕಿನ ಸರ್ವ್‌ ಮತ್ತು ಆಕರ್ಷಕ ಡ್ರಾಪ್‌ಗಳ ಮೂಲಕ ಪಾಯಿಂಟ್ಸ್‌ ಕಲೆಹಾಕಿದ ಮಾರ್ಕ್‌ ನಿರಾಯಾಸವಾಗಿ ಗೇಮ್‌ ಗೆದ್ದರು.

ಎರಡನೇ ಗೇಮ್‌ನಲ್ಲೂ ಮಾರ್ಕ್‌ ಅಬ್ಬರಿಸಿದರು. ಬಲಿಷ್ಠ ಕ್ರಾಸ್‌ಕೋರ್ಟ್‌ ಹೊಡೆತಗಳ ಮೂಲಕ ಭಾರತದ ಆಟಗಾರನನ್ನು ಕಂಗೆಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry