ಪಾಸ್‌ಪೋರ್ಟ್‌ ರದ್ದಾದರೂ ನೀರವ್‌ ಮೋದಿ ಪ್ರಯಾಣ ನಿರಾತಂಕ!

7

ಪಾಸ್‌ಪೋರ್ಟ್‌ ರದ್ದಾದರೂ ನೀರವ್‌ ಮೋದಿ ಪ್ರಯಾಣ ನಿರಾತಂಕ!

Published:
Updated:

ನವದೆಹಲಿ: ತಲೆಮರೆಸಿಕೊಂಡಿರುವ ವಜ್ರದ ಉದ್ಯಮಿ ನೀರವ್‌ ಮೋದಿಯ ಪಾಸ್‌ಪೋರ್ಟ್‌ ಅನ್ನು ಕೇಂದ್ರ ಸರ್ಕಾರ ರದ್ದು ಮಾಡಿದೆ ಎಂಬ ಮಾಹಿತಿಯನ್ನು ಇಂಟರ್‌ಪೋಲ್‌ಗೆ ತಿಳಿಸಿದ್ದರೂ, ಅವರು ಹಲವು ದೇಶಗಳಲ್ಲಿ ನಿರಾತಂಕವಾಗಿ ಪ್ರಯಾಣಿಸುತ್ತಿರುವುದು ತಿಳಿದುಬಂದಿದೆ ಎಂದು ಸಿಬಿಐ ಹೇಳಿದೆ.

ಫೆಬ್ರುವರಿ 15ರಂದೇ ನಾವು ಈ ಬಗ್ಗೆ ಇಂಟರ್‌ಪೋಲ್‌ಗೆ ಮಾಹಿತಿ ನೀಡಿದ್ದೇವೆ. ಫೆಬ್ರುವರಿ 24ರ ವೇಳೆಗೆ, ಇಂಟರ್‌ಪೋಲ್‌ನ ಎಲ್ಲ ಸದಸ್ಯ ರಾಷ್ಟ್ರಗಳ ಕಚೇರಿಗೂ ಈ ಮಾಹಿತಿ ಹೋಗಿದೆ. ನಮ್ಮ ಮನವಿ ಮೇರೆಗೆ, ಇಂಟರ್‌ಪೋಲ್‌ ಕೂಡ ಈ ವಿಷಯವನ್ನು ತನ್ನ ವೆಬ್‌ಸೈಟ್‌ನಲ್ಲಿ ಪ್ರಸಾರ ಮಾಡಿದೆ ಎಂದು ಸಿಬಿಐ ಹೇಳಿದೆ.

ಅಮೆರಿಕ, ಸಿಂಗಪುರ, ಬೆಲ್ಜಿಯಂ, ಯುಎಇ ಹಾಗೂ ಫ್ರಾನ್ಸ್‌ನಲ್ಲಿ ನೀರವ್‌ ಮೋದಿ ಪ್ರಯಾಣಿಸಿರುವ ಸಾಧ್ಯತೆ ಇದೆ. ಹೀಗಾಗಿ, ಅವರ ಪಾಸ್‌ಪೋರ್ಟ್‌ ರದ್ದುಪಡಿಸಿರುವ ಮಾಹಿತಿಯನ್ನು ಈ ದೇಶಗಳಿಗೂ ತಿಳಿಸುವಂತೆ ಸಿಬಿಐ ಇಂಟರ್‌ಪೋಲ್‌ಗೆ ಮನವಿ ಮಾಡಿದೆ.

ಪಂಜಾಬ್‌ ನ್ಯಾಷನಲ್‌ ಬ್ಯಾಂಕಿಗೆ ನಕಲಿ ದಾಖಲೆ ನೀಡಿ ವಂಚಿಸಿರುವ ಆರೋಪ ನೀರವ್‌ ಮೋದಿ ಮೇಲಿದ್ದು, ಅವರು ತಲೆಮರೆಸಿಕೊಂಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 1

  Sad
 • 0

  Frustrated
 • 1

  Angry