ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರಂತರ ಕಲಿಕೆಯಿಂದ ಯಶಸ್ಸು ಸಾಧ್ಯ

ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಶಿಕ್ಷಕರಿಗೆ ಅಭಿನಂದನಾ ಸಮಾರಂಭ: ಸಿಇಒ ವಿಕಾಸ್ ಸುರಳಕರ್ ಅಭಿಮತ
Last Updated 19 ಜೂನ್ 2018, 10:43 IST
ಅಕ್ಷರ ಗಾತ್ರ

ಬಾಗಲಕೋಟೆ: ‘ಮನುಷ್ಯ ಹುಟ್ಟಿದಾಗಿನಿಂದ ಸಾಯುವವರೆಗೂ ಕಲಿಯಬೇಕಿರುವುದು ಸಾಕಷ್ಟಿದೆ. ಶಿಕ್ಷಣವೆಂದರೆ ಇಷ್ಟೇ ಎಂಬ ಉದಾಸೀನ ಮನೋಭಾವ ತೊರೆದು ನಿರಂತರ ಶಿಕ್ಷಣ ಪಡೆದಾಗ ಮಾತ್ರ ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯ’ ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಕಾಸ್ ಸುರಳಕರ್ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ನವನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಸೋಮವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಎಸ್ಎಸ್ಎಲ್‌ಸಿ ಪರೀಕ್ಷೆ ಫಲಿತಾಂಶದಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಶಿಕ್ಷಕರಿಗೆ ಅಭಿನಂದನಾ ಸಮಾರಂಭ ಉದ್ದೇಶಿಸಿ ಅವರು ಮಾತನಾಡಿದರು.

‘ಪ್ರತಿಭಾನ್ವಿತ ವಿದ್ಯಾರ್ಥಿಯ ಹಿಂದೆ ಪಾಲಕರು, ಶಿಕ್ಷಕರು, ಸಂಬಂಧಿಕರು ಹಾಗೂ ಸಮಾಜದವರ ಪರಿಶ್ರಮ ಅಡಗಿದೆ. ಶಾಲೆಯಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದರೆ ಅದು ಸಾರ್ವಜನಿಕರ ಗಮನ ಸೆಳೆಯುತ್ತದೆ. ಪೋಷಕರು ತಮ್ಮ ಮಕ್ಕಳನ್ನು ಅದೇ ಶಾಲೆಗೆ ಸೇರಿಸಲು ಮುಂದಾಗುತ್ತಾರೆ’ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಷ್ಯಂತ್ ಮಾತನಾಡಿ, ‘ಎಸ್ಎಸ್ಎಲ್‌ಸಿ ಹಂತದವರೆಗೆ ಮಕ್ಕಳು ಎಲ್ಲ ವಿಷಯಗಳ ಬಗ್ಗೆ ಅಧ್ಯಯನ ಮಾಡುತ್ತಾರೆ. ಆದರೆ ಈ ಹಂತ ದಾಟಿದ ಮೇಲೆ ಮುಂದಿನ ಶಿಕ್ಷಣಕ್ಕೆ ಆಯ್ಕೆ ವಿಷಯದಲ್ಲಿ ಗೊಂದಲ ಹುಟ್ಟುವುದು ಸಹಜ. ವಿಷಯ ಆಯ್ಕೆ ವಿಚಾರದಲ್ಲಿ ಪಾಲಕರು ಒತ್ತಡ ಹೇರಬಾರದು. ಅವರಲ್ಲಿ ಯಾವ ವಿಷಯದಲ್ಲಿ ಆಸಕ್ತಿ ಇದೆ ಎಂದು ತಿಳಿದು ಅದರಲ್ಲಿ ಮುಂದುವರೆಯಲು ಬಿಡಬೇಕು’ ಎಂದರು.

ಜಿಲ್ಲಾ ಪಂಚಾಯತಿ ಉಪಾಧ್ಯಕ್ಷ ಮುತ್ತಪ್ಪ ಕೋಮಾರ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಚನ್ನನಗೌಡರ ಪರನಗೌಡರ ಮಾತನಾಡಿದರು. ಜಿಲ್ಲಾ ಪಂಚಾಯ್ತಿ ಶಿಕ್ಷಣ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷೆ ಸುಜಾತಾ ಸಿಂಗಾಡೆ ಕಾರ್ಯಕ್ರಮ ಉದ್ಘಾಟಿಸಿದರು. ಡಿಡಿಪಿಐ ಎಂ.ಆರ್.ಕಾಮಾಕ್ಷಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಪಂಚಾಯ್ತಿ ಉಪಕಾರ್ಯದರ್ಶಿ ಅಮರೇಶ ನಾಯಕ, ಯೋಜನಾ ಸಮನ್ವಯಾಧಿಕಾರಿ ಎನ್.ವೈ.ಕುಂದರಗಿ ಹಾಜರಿದ್ದರು.

ಮಕ್ಕಳಿಗೆ ಪ್ರತಿಭಾ ಪುರಸ್ಕಾರ

ಜಿಲ್ಲೆಯಲ್ಲಿ 2017-–18ನೇ ಸಾಲಿನ ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ ಕನ್ನಡ ವಿಷಯದಲ್ಲಿ ಅತಿ ಹೆಚ್ಚು ಅಂಕಗಳಿಸಿದ ಪವಿತ್ರಾ ಅರೆನಾಡ, ಅಮೃತ ಮುರಗುಂಡಿ (ಶೇ.98.24), ಇಂಗ್ಲಿಷ್‌ನಲ್ಲಿ ರವೀನಾ ಪಾಟೀಲ (ಶೇ 99.2-), ಸಹನಾ ಹಳಿಂಗಳಿ (ಶೇ 99.04-), ಉರ್ದು–ತಂಜುಮ್ ಅತ್ತಾರ್, ಸಿಮ್ರಾನ್ ನಾಯ್ಕವಾಡ (ಶೇ 95.2-), ಮರಾಠಿ: ಪ್ರಿಯಾಂಕ ಶಾಸ್ತ್ರೀ (ಶೇ 75.65).

ಕನ್ನಡ ಮಾಧ್ಯಮ: ಮುತ್ತುರಾಜ ಧರ್ಮಟ್ಟಿ, ಇಮಾಮ್‌ಹುಸೇನ್ ಕೊನಸಾಗರ, ಹನುಮಂತ ನಕ್ಕರಗುಂದಿ, ಪೂಜಾ ಶೇಬಿನಕಟ್ಟಿ, ಅಶ್ವಿನಿ ಕೊಲ್ಲೂರ, ಚೇತನ ಸಿದ್ದಾಪುರ, ದಾನಮ್ಮ ಸಿಂಪಿ, ಸ್ನೇಹಾವಿಜಯ ಬಳಿಗಾರ, ಸೃಷ್ಟಿ ಜೋಶಿ, ಅನಿತಾ ಮಂಟೂರ, ಅಶೋಕ ಹತ್ತಿ, ಅಕ್ಷತಾ ಕುಂಬಾರ.

ಇಂಗ್ಲಿಷ್ ಮಾಧ್ಯಮ: ಸಾಗರ ಕನ್ನೂರ, ಮಹಮದ್‌ ಖಲೀಫ್ ಮನಿಯಾರ, ಅರ್ಪಿತಾ ಕಡಗದ, ಹೇಮಲತಾ ಚೌಹಾಣ, ಮೇಘಾ ಜೈನರ, ಭಾಗ್ಯಶ್ರೀ ಬಳಿಗೇರ, ರಮ್ಯಾ ಬೋನಗೇರಿ, ಸೃಷ್ಟಿ ಚಂದರಗಿ, ಅಡಿವೇಶ ಕಿತ್ತೂರ, ರಾಜೇಶ್ ಬಿರಾದಾರ, ಭೂಮಿಕಾ ಸರಗಣಾಚಾರಿ, ಅನುಷಾ ಅಂಬೋರೆ.

ಉತ್ತಮ ಶಿಕ್ಷಕರಿಗೆ ಅಭಿನಂದನೆ

ಕನ್ನಡ: ಎಂ.ಎನ್.ಬಿಂಗೇರಿ, ಎನ್.ಎಸ್.ಘಂಟಿ, ಡಿ.ಬಿ.ಕಟ್ಟಿ, ಹೊಳೆಬಸವರಾಜ ಪತ್ತಾರ, ಕ್ಯು.ಎ.ಮಸ್ತ್ರಾಸ.

ಇಂಗ್ಲಿಷ್: ಪವಿತ್ರಾ ಜಾಲಿಹಾಳ, ಎಸ್.ವಿ.ಆಲೂರ, ಎಸ್.ಎಸ್.ತಳೇವಾಡ, ಎಸ್.ಬಿ.ಬಸಾಪುರ, ಆರ್.ಎಂ.ಡೊಂಬರ, ಪಿ.ಎಸ್.ಅಥಣಿ.

ಹಿಂದಿ : ವೀರೇಶ ಚರಂತಿಮಠ, ಎಂ.ಎಚ್.ನುರಪ್ಪನವರ, ಎನ್.ಬಿ.ನಾಗರಾಳ, ಎ.ಎಂ.ಪಲ್ಲೇದ, ಆರ್.ಎಸ್.ಮಮದಾಪುರ, ಆರ್.ಶಾರದಾ.

ಗಣಿತ: ಎಚ್.ಪಿ.ಚಿತ್ರಗಾರ, ಎ.ಬಿ.ನಾಯಕೋಡಿ, ಎಸ್.ಜಿ.ವಿಜಾಪುರ, ಎ.ಎನ್.ಹೊಸಮನಿ, ಬಿ.ಎಂ.ದಫೇದಾರ, ಎಂ.ಎಂ.ಮಮದಾಪುರ.

ವಿಜ್ಞಾನ: ಐ.ಸಿ.ಗೌಡರ, ಪಿ.ಎಸ್.ಮುತ್ತಗಿ, ಎಸ್.ಪಿ.ಓಣಿ, ಪಿ.ವಿ.ಬಾದವಾಡಗಿ, ಎಂ.ಡಿ.ಬಳಗಾನೂರ. ವಿ.ಎಚ್.ಗೌಡರ.

ಸಮಾಜ ವಿಜ್ಞಾನ : ಎಲ್.ಎಸ್.ಬೀಳಗಿ, ಎಸ್.ಸಿ.ಗೌಡರ, ಎಂ.ಎಂ.ಮುಲ್ಲಾ, ಶ್ರೀಧರ ಗೌಡರ, ಎ.ಪಿ.ದುಮ್ಮಣ್ಣವರ. ಬಿ.ಬಿ.ವಾಲಿಕಾರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT