ವಿಡಿಯೊದ ಕೀ ಫ್ರೇಮ್ ಒಂದನ್ನು ರಿವರ್ಸ್ ಇಮೇಜ್ ವಿಧಾನದಲ್ಲಿ ಗೂಗಲ್‌ನಲ್ಲಿ ಹುಡುಕಾಟ ನಡೆಸಿದಾಗ ಎಐ ವಿಡಿಯೊಸ್ (@AI-Videos-Arg) ಎಂಬ ಯೂಟ್ಯೂಬ್ ಚಾನೆಲ್‌ನಲ್ಲಿ ಇದೇ ವಿಡಿಯೊ ಪ್ರಕಟವಾಗಿರುವುದು ಕಂಡು ಬಂತು. ಆ ಚಾನೆಲ್‌ನಲ್ಲಿನ ಇತರ ವಿಡಿಯೊಗಳನ್ನು ಪರಿಶೀಲನೆಗೆ ಒಳಪಡಿಸಿದಾಗ, ಅದರಲ್ಲಿನ ಬಹುತೇಕ ವಿಡಿಯೊಗಳು ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನದಿಂದ ಸೃಷ್ಟಿಸಿದ ವಿಡಿಯೊಗಳು ಎಂಬುದು ಕಂಡು ಬಂತು. ವಿಡಿಯೊವನ್ನು ಎಐ ಪತ್ತೆ ಹಚ್ಚುವ ಹೈವ್ ಮಾಡರೇಷನ್ ಟೂಲ್‌ನಲ್ಲಿ ಹಾಕಿದಾದ, ಅದು ಎಐ ವಿಡಿಯೊ ಎಂಬುದು ದೃಢಪಟ್ಟಿತು ಎಂದು ಪಿಟಿಐ ಫ್ಯಾಕ್ಟ್ ಚೆಕ್ ವರದಿ ತಿಳಿಸಿದೆ.