ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫ್ಯಾಕ್ಟ್‌ಚೆಕ್: ಬರಿಗಾಲಿನಲ್ಲಿ ಭಾರತೀಯ ಫುಟ್‌ಬಾಲ್ ಆಟಗಾರರು–ಇದು ಸತ್ಯವೇ?

Last Updated 25 ಆಗಸ್ಟ್ 2022, 22:58 IST
ಅಕ್ಷರ ಗಾತ್ರ

ಮೂವರು ಫುಟ್‌ಬಾಲ್‌ ಆಟಗಾರರು ಬರಿಗಾಲಿನಲ್ಲಿ ಕ್ರೀಡಾಂಗಣ ಪ್ರವೇಶಿಸುತ್ತಿರುವ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅದರ ಜತೆಯಲ್ಲಿ, ‘ಇದು ಭಾರತೀಯ ಫುಟ್‌ಬಾಲ್‌ ಆಟಗಾರರ ಚಿತ್ರ. 1948ರಲ್ಲಿ ಯೂರೋಪ್‌ನಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ ಭಾರತೀಯ ಫುಟ್‌ಬಾಲ್ ತಂಡ ಭಾಗವಹಿಸಿತ್ತು. ಆದರೆ, ನೆಹರೂ ಸರ್ಕಾರವು ಅವರಿಗೆ ಷೂಗಳನ್ನು ನೀಡಿರಲಿಲ್ಲ. ಷೂಗಳಿಲ್ಲದೇ ಆಟವಾಡಲು ಕಷ್ಟವಾಗಿ ಭಾರತೀಯ ತಂಡವು ಸೋಲಬೇಕಾಯಿತು. ಖಾಸಗಿ ವಿಮಾನದಲ್ಲಿ ಓಡಾಡುತ್ತಿದ್ದ ನೆಹರೂ ಅವರು, ಆಟಗಾರರಿಗೆ ಷೂ ಒದಗಿಸಿರಲಿಲ್ಲ’ ಎಂದು ಆರೋಪಿಸಲಾಗಿದೆ.

ಇದು ತಿರುಚಲಾದ ಮಾಹಿತಿ ಎಂದು ದಿ ಲಾಜಿಕಲ್ ಇಂಡಿಯನ್ ಫ್ಯಾಕ್ಟ್‌ಚೆಕ್ ಪ್ರಕಟಿಸಿದೆ. ‘1948ರ ಒಲಿಂಪಿಕ್ಸ್‌ನಲ್ಲಿ ಭಾಗಿಯಾಗಿದ್ದ ಭಾರತೀಯ ಫುಟ್‌ಬಾಲ್‌ ತಂಡಕ್ಕೆ ಷೂಗಳನ್ನು ಒದಗಿಸಲಾಗಿತ್ತು. ಆದರೆ, ತಂಡದ ಒಂಬತ್ತು ಆಟಗಾರರು ಷೂ ಇಲ್ಲದೇ ಆಟವಾಡುವುದೇ ಅನುಕೂಲ ಎಂದು ಹೇಳಿದ್ದರು. ಹೀಗಾಗಿ ಅವರು ಷೂ ಬಳಸುತ್ತಿರಲಿಲ್ಲ. ಈ ಬಗ್ಗೆ ಪ್ರಶ್ನಿಸಿದಾಗ ತಂಡದ ನಾಯಕ, ‘ನಾವು ಫುಟ್‌ಬಾಲ್ ಆಡುತ್ತೇವೆ. ನೀವು ಬೂಟ್‌ಬಾಲ್ ಆಡುತ್ತೀರಿ’ ಎಂದು ಹೇಳಿದ್ದರು. ಷೂ ಇದ್ದರೂ ಆಟಗಾರರು ಷೂ ಬಳಸುತ್ತಿರಲಿಲ್ಲ ಎಂಬುದನ್ನು ತಂಡದ ಟ್ರೇನರ್ ಆಗಿದ್ದ ಡಿ.ಬಿ.ಚಟರ್ಜಿ ಹೇಳಿದ್ದರು ಎಂದು 2014ರಲ್ಲಿ ದಿ ಹಿಂದೂ ವರದಿ ಮಾಡಿತ್ತು. ಆದರೆ, ಈ ಮಾಹಿತಿಗಳನ್ನು ತಿರುಚಿ ತಪ್ಪು ಅಭಿಪ್ರಾಯ ಬರುವಂತೆ ಸುಳ್ಳು ಸುದ್ದಿ ಹಂಚಿಕೊಳ್ಳಲಾಗುತ್ತಿದೆ’ ಎಂದು ಫ್ಯಾಕ್ಟ್‌ಚೆಕ್‌ನಲ್ಲಿ ವಿವರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT