ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Fact Check: ರಾಹುಲ್‌ ಗಾಂಧಿ ರಾಜೀನಾಮೆ ಪತ್ರ ಓದುತ್ತಿದ್ದಾರೆ ಎಂಬುದು ಸುಳ್ಳು

Fact Check
Published 15 ಏಪ್ರಿಲ್ 2024, 21:32 IST
Last Updated 15 ಏಪ್ರಿಲ್ 2024, 21:32 IST
ಅಕ್ಷರ ಗಾತ್ರ

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಪಕ್ಷಕ್ಕೆ ರಾಜೀನಾಮೆ ನೀಡುತ್ತಿದ್ದಾರೆ ಎಂಬಂಥ ಪೋಸ್ಟ್‌ಗಳು ಹರಿದಾಡುತ್ತಿವೆ. ರಾಹುಲ್‌ ಅವರು ತಮ್ಮ ರಾಜೀನಾಮೆ ಪತ್ರವನ್ನು ಓದುತ್ತಿದ್ದಾರೆ ಎಂದು ಹೇಳಲಾಗಿರುವ ವಿಡಿಯೊಗಳನ್ನೂ ಪೋಸ್ಟ್‌ನೊಂದಿಗೆ ಅಂಟಿಸಲಾಗುತ್ತಿದೆ. ‘ನಾನು ರಾಹುಲ್‌ ಗಾಂಧಿ. ನಾನು ಕಾಂಗ್ರೆಸ್‌ಗೆ ರಾಜೀನಾಮೆ ನೀಡುತ್ತಿದ್ದೇನೆ. ಚುನಾವಣೆಗಾಗಿ ಹಿಂದೂ ಎಂದು ನನ್ನನ್ನು ನಾನೇ ಬಿಂಬಿಸಿಕೊಂಡು ಸಾಕಾಗಿದೆ. ನಾನು ಅನ್ಯಾಯ ಯಾತ್ರೆ ಮಾಡಿ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದೇನೆ. ಆದರೆ, ಮೋದಿ ಅವರು ಭ್ರಷ್ಟರನ್ನು ಜೈಲಿಗೆ ಅಟ್ಟುತ್ತಿದ್ದಾರೆ. ಅವರ ನಾಯತ್ವದಲ್ಲಿ ನಾವು ಭ್ರಷ್ಟರನ್ನು ಜೈಲಿಗೆ ಕಳುಹಿಸುತ್ತಲೇ ಇರಬೇಕಾಗುತ್ತದೆ. ಅದಕ್ಕಾಗಿ ನಾನು ನನ್ನ ಅಜ್ಜಿ ಮನೆ ಇಟಲಿಗೆ ಹೋಗುತ್ತೇನೆ’ ಎಂದು ರಾಹುಲ್‌ ಅವರು ಹೇಳುತ್ತಿರುವಂತೆ ವಿಡಿಯೊದಲ್ಲಿ ಧ್ವನಿ ಇದೆ. ಆದರೆ, ಇದು ಸುಳ್ಳು ಸುದ್ದಿ.

ರಾಹುಲ್‌ ಗಾಂಧಿ ಅವರು ಕೇರಳದ ವಯನಾಡ್‌ನಿಂದ ತಮ್ಮ ಉಮೇದುವಾರಿಕೆಯನ್ನು ಸಲ್ಲಿಸುತ್ತಿರುವ ವಿಡಿಯೊ ಇದಾಗಿದೆ. ಈ ವಿಡಿಯೊವನ್ನು ಹಲವು ಮಾಧ್ಯಮಗಳು ಹಂಚಿಕೊಂಡಿವೆ. ಕಾಂಗ್ರೆಸ್‌ ಕೂಡ ತನ್ನ ಖಾತೆಗಳಲ್ಲಿ ಪೂರ್ತಿ ವಿಡಿಯೊವನ್ನು ಹಂಚಿಕೊಂಡಿದೆ. ಎಲ್ಲೂ ರಾಹುಲ್‌ ಅವರು ರಾಜೀನಾಮೆ ನೀಡುತ್ತಿದ್ದೇನೆ ಎಂದು ಹೇಳಿರುವಂಥ ಯಾವುದೇ ಮಾಹಿತಿ ಇಲ್ಲ. ಡೀಪ್‌ಫೇಕ್‌ ಅನ್ನು ಪತ್ತೆ ಹಚ್ಚುವ ವಿವಿಧ ತಂತ್ರಜ್ಞಾನದ ಮೂಲಕ ವಿಡಿಯೊದಲ್ಲಿನ ಧ್ವನಿಯನ್ನು ಪತ್ತೆ ಹಚ್ಚಲಾಯಿತು. ಈ ಪರೀಕ್ಷೆಯಲ್ಲಿ, ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೊದಲ್ಲಿನ ರಾಹುಲ್‌ ಅವರ ಧ್ವನಿಯು ಕೃತಕ ಬುದ್ಧಿಮತ್ತೆಯಿಂದ ಸೃಷ್ಟಿಸಲಾಗಿದೆ ಎಂಬುದು ಪತ್ತೆಯಾಯಿತು. ಆದ್ದರಿಂದ, ರಾಹುಲ್‌ ಅವರು ರಾಜೀನಾಮೆ ಪತ್ರ ಓದುತ್ತಿದ್ದಾರೆ ಎಂಬುದು ಸುಳ್ಳು ಸುದ್ದಿ ಎಂದು ಬೂಮ್‌ಲೈವ್‌ ಫ್ಯಾಕ್ಟ್‌ಚೆಕ್‌ ಪ್ರಕಟಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT