ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

fact check: ಕೇರಳದಲ್ಲಿ ಲವ್ ಜಿಹಾದ್‌ಗೆ ಜಾಹೀರಾತಿನ ಬೆಂಬಲ?

Published 27 ಏಪ್ರಿಲ್ 2023, 14:05 IST
Last Updated 27 ಏಪ್ರಿಲ್ 2023, 20:35 IST
ಅಕ್ಷರ ಗಾತ್ರ

ಕೇರಳದಲ್ಲಿ ‘ಲವ್ ಜಿಹಾದ್‌’ಗೆ ಪ್ರೇರಣೆ ನೀಡಲಾಗುತ್ತಿದೆ ಎಂದು ಹೇಳಲಾಗುವ ಪೊಸ್ಟರ್‌ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಮುಸ್ಲಿಂ ಯುವಕ ಹಾಗೂ ಹಿಂದೂ ಯುವತಿಯರು ಇರುವ ವಿಡಿಯೊ ಜಾಹೀರಾತು ವಿವಾದಕ್ಕೆ ಕಾರಣವಾಗಿದೆ. ಬ್ಯಾಗ್ ತಯಾರಿಕಾ ಸಂಸ್ಥೆ ವಿಐಪಿ ಸ್ಕೈಬ್ಯಾಗ್‌ನ ಜಾಹೀರಾತು ಇದಾಗಿದೆ ಎಂದು ಆರೋಪಿಸಲಾಗಿದೆ. ಮುಕೇಶ್ ನರೇಂಶ್ ಎಂಬ ಜಾಲತಾಣ ಬಳಕೆದಾರರು ಜಾಹೀರಾತಿಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಆದರೆ ಈ ವಿಡಿಯೊವನ್ನು ತಿರಚಲಾಗಿದ್ದು, ಈ ವಿಡಿಯೊ ಕುರಿತಂತೆ ಮಾಡಲಾಗಿರುವ ಆರೋಪಗಳು ಸುಳ್ಳು.

ವಿಡಿಯೊದಲ್ಲಿ ಎರಡು ಬೇರೆ ಬೇರೆ ದೃಶ್ಯಗಳನ್ನು ಸೇರಿಸಿ ಎಡಿಟ್ ಮಾಡಲಾಗಿದೆ ಎಂದು ‘ದಿ ಕ್ವಿಂಟ್’ ಹೇಳಿದೆ. ಮಲಯಾಳ ಚಿತ್ರರಂಗದ  ಸುಮಿ ರಶಿಕ್ ಹಾಗೂ ವಿಷ್ಣು ವಿಜಯನ್ ಅವರು ನಟಿಸಿದ್ದ ‘ಸೂಫಿಯುಮ್ ಸುಜಾತಾಯುಮ್’ ಚಿತ್ರದ ಗೀತೆಯ ತುಣುಕೊಂದು ಈ ವಿಡಿಯೊದಲ್ಲಿದೆ. ಸ್ಕೈಬ್ಯಾಗ್‌ ಸಂಸ್ಥೆಯು 2015ರಲ್ಲಿ ನಿರ್ಮಿಸಿದ್ದ, ಬಾಲಿವುಡ್ ನಟ ವರುಣ್ ಧವನ್ ಕಾಣಿಸಿಕೊಂಡಿರುವ ಜಾಹೀರಾತಿನ ಒಂದು ದೃಶ್ಯವನ್ನು ಈ ವಿಡಿಯೊಗೆ ಸೇರಿಸಲಾಗಿದೆ. ಇದು ನಕಲಿ ವಿಡಿಯೊ ಎಂದು ವಿಐಪಿ ಬ್ಯಾಗ್ಸ್‌ ಸ್ಪಷ್ಟನೆ ನೀಡಿದ್ದು, ಪೊಲೀಸರಿಗೆ ದೂರನ್ನೂ ನೀಡಿದೆ. ವಿಡಂಬನೆ ಉದ್ದೇಶಕ್ಕೆ ತೆರೆಯಲಾಗಿರುವ ‘ಪಫಿಂಗ್ಟನ್ ಘೋಸ್ಟ್’ ಎಂಬ ಫೇಸ್‌ಬುಕ್ ಪುಟದಲ್ಲಿ ತಿರುಚಲಾದ ಈ ವಿಡಿಯೊವನ್ನು ಮೊದಲು ಅಪ್‌ಲೋಡ್ ಮಾಡಲಾಗಿದೆ. ಇದನ್ನೇ ಕಂಪನಿಯ ಜಾಹೀರಾತು ಎಂಬುದಾಗಿ ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ ಎಂದು ‘ದಿ ಕ್ವಿಂಟ್’ ವರದಿ ಮಾಡಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT